ಜನ ಮನದ ನಾಡಿ ಮಿಡಿತ

Advertisement

ಏಕಾಏಕಿ ಹೊತ್ತಿ ಉರಿದ ಬಸ್; ಇಬ್ಬರು ಸಜೀವ ದಹನ

ಸ್ಲೀಪರ್​ ಬಸ್ ಒಂದಕ್ಕೆ ದಾರಿ ಮಧ್ಯೆ ಬೆಂಕಿ ಹತ್ತಿಕೊಂಡು ಉರಿದ ಕಾರಣ ಮಲಗಿದ್ದ ಇಬ್ಬರು ಪ್ರಯಾಣಿಕರು ಸಜೀವ ದಹನವಾದ ದಾರುಣ ಘಟನೆ ದೆಹಲಿ ಮತ್ತು ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುರುಗ್ರಾಮದ ಸಿಗ್ನೇಚರ್ ಟವರ್ ಮೇಲ್ಸೇತುವೆ ಬಳಿ ನಡೆದಿದೆ.

ದೆಹಲಿಗೆ ತೆರಳುತ್ತಿದ್ದ ಪ್ರಯಾಣಿಕರ ಬಸ್‌ಗೆ ಬುಧವಾರ ರಾತ್ರಿ ಗುರುಗ್ರಾಮ್ ತಲುಪುತ್ತಿದ್ದಂತೆ ಬಸ್​​ನಲ್ಲಿ ದಿಢೀರ್​ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಸ್​​ನಲ್ಲಿದ್ದ ಕೆಲ ಪ್ರಯಾಣಿಕರು ಬಸ್‌ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ನಿದ್ರಾವಸ್ಥೆಯಲ್ಲಿದ್ದ ಇಬ್ಬರಿಗೆ ಬೆಂಕಿ ತಗುಲಿ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ 12ಕ್ಕೂ ಅಧಿಕ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

ಘಟನಾ ಸ್ಥಳಕ್ಕೆ ಪೋಲಿಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸ್ಲೀಪರ್‌ ಬಸ್‌ನಿಂದ ಎರಡು ಮೃತ ದೇಹಗಳನ್ನು ಹೊರತೆಗೆಯಲಾಗಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

ಬಂಟ್ವಾಳ: ಐದಾರು ತಿಂಗಳಿನಿಂದ ವಿಪರೀತ ಕುಡಿತದ ಚಟಕ್ಕೆ ಬಿದ್ದ ವ್ಯಕ್ತಿ ನಾಪ*ತ್ತೆ….!

ಬಂಟ್ವಾಳ: ತಂದೆ ತಾಯಿ ಕೆಲಸಕ್ಕೆ ಹೋದ ವೇಳೆ ಚಿನ್ನಾಭರಣ ಸಹಿತ ಮಗಳು ನಾಪತ್ತೆ…!

ಬಂಟ್ವಾಳ: ವಾರೆಂಟ್ ಆರೋಪಿ ಕಾವಳಪಡೂರು ನಿವಾಸಿ ನಜಿರ್ ಅಹ್ಮದ್ ಬಂಧನ…!

ಬಂಟ್ವಾಳ: ರಸ್ತೆಯಲ್ಲಿ ರಾಶಿ ಹಾಕಲಾಗಿದ್ದ ಕಾಂಕ್ರೀಟ್ ತುಂಡುಗಳಿಂದ ರಸ್ತೆ ಅಪಘಾತ…!

error: Content is protected !!