ದಕ್ಷಿಣ ಕನ್ನಡ : ದೀಪಾವಳಿ ಹಬ್ಬದ ಸಂದರ್ಭ ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾ ಚಾರ್ಯವರ್ಯ ಸ್ವಾಮೀಜಿಯವರು ಕರೆ ನೀಡಿದ್ದಾರೆ.

ಶಬ್ದ ಮಾಲಿನ್ಯ ಪರಿಸರ ಮಾಲಿನ್ಯಕ್ಕೆ, ವಾಯುಮಾಲಿನ್ಯಕ್ಕೆ ಕಾರಣವಾಗುವಂತ ಅಪಾಯಕಾರಿ ಪಟಾಕಿ ಸಿಡಿಸದೆ ನಮ್ಮ ಹಬ್ಬ ಇನ್ನೊಬ್ಬರಿಗೆ ಹಾನಿಯಾಗದಂತೆ ಹಬ್ಬ ಆಚರಿಸುವುದು ನಮ್ಮೆಲ್ಲರ ಕರ್ತವ್ಯ, ಎಲ್ಲರೂ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸಿ, ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ, ಆ ಮುಖಾಂತರ ಉತ್ತಮ ಸಮಾಜ, ಉತ್ತಮ ರಾಜ್ಯ ದೇಶವನ್ನು ಕಟ್ಟೋಣ, ಆರೋಗ್ಯವಂತ ನಾಗರಿಕ ಮತ್ತು ಸಮಾಜಕ್ಕೆ ನಾವೆಲ್ಲರೂ ಕಂಕಣಭದ್ಧರಾಗಬೇಕಿದೆ, ಇಂದಿನ ಪ್ರಕೃತಿ, ಹವಾಮಾನ ವೈಪರೀತ್ಯಕ್ಕೆ ಪರಿಸರವೇ ಮೂಲ ಕಾರಣವಾಗಿದ್ದು ಇದನ್ನು ನಾವಿಲ್ಲರೂ ಜೊತೆಯಾಗಿ ರಕ್ಷಿಸಬೇಕಿದೆ, ಮುಂದಿನ ಪೀಳಿಗೆಗಾಗಿ ನಾವು ಉತ್ತಮ ಪ್ರಕೃತಿಯನ್ನು ನೀಡಬೇಕಿದೆ.

ಸಾರ್ವಜನಿಕರು ಸಾಧ್ಯವಾದಷ್ಟು ಪ್ಲಾಸ್ಟಿಕ್ ಚೀಲ ತ್ಯಜಿಸಬೇಕಿದೆ, ಬದಲಿ ಮಾರ್ಗ ಹುಡುಕಿ ಪರಿಸರ ಸಂರಕ್ಷಿಸಬೇಕಿದೆ, ಎಲ್ಲರೂ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಸಹಕರಿಸಬೇಕಿದೆ, ನಮ್ಮ ಪ್ರಕೃತಿ ಸ್ವಚ್ಛವಾಗಿ ಇಡೋಣ, ಪರಿಸರವನ್ನು ರಕ್ಷಿಸೋಣ, ಹಸಿರೇ ಉಸಿರಾಗಿಸೋಣ, ಎಂದರು.

ಸಾಧ್ಯವಾದಷ್ಟು ದೇಶೀಯ ವಸ್ತು ಖರೀದಿಸಿ ಸ್ವಾವಲಂಬನೆಯ ದೇಶ ಕಟ್ಟಲು ಸರ್ವರೂ ಕೈಜೋಡಿಸೋಣ ಎಂದು ಅವರು ಕರೆ ನೀಡಿದ್ದಾರೆ.



