ಕಲ್ಲಡ್ಕ ನ 12, ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮ ಪಂಚಾಯತ್ ನ ಸ್ನೇಹ ಸಂಜೀವಿನಿ ಒಕ್ಕೂಟ ದ ಸದಸ್ಯರಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ದೀಪಾವಳಿ ಹಬ್ಬದ ಪ್ರಯುಕ್ತ. “ದೀಪ ಸಂಜೀವಿನಿ” ಕಾರ್ಯ್ರಮ ಆಯೋಜಿಸಿ ಒಕ್ಕೂಟ ಮಹಿಳೆಯರಿಂದ ವಿವಿಧ ವಿನ್ಯಾಸದ ಮಣ್ಣಿನ ಹಣತೆಗಳ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ವನ್ನು ವೀರಕಂಭ ಮಜಿ ಶಾಲಾ ಹತ್ತಿರ ಇರುವ ಶ್ರೀ ಶಾರದಾ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಲಾಗಿತ್ತು.

ಹಿರಿಯರಾದ ನೋಣಯ್ಯ ರವರು ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ವಲಯ ಕೆ ಎಂ ಎಫ್ ವಿಸ್ತರಣಾಧಿಕಾರಿ ಜಗದೀಶ್ ಎ, ಬಂಟ್ವಾಳ ಸಂಜೀವಿನಿ ಅಭಿಯಾನ ಘಟಕದ ವಲಯ ಮೇಲ್ವಿಚಾರಕಿ ಕುಸುಮ, ಬಿ ಆರ್ ಪಿ ಇ ಬಿ ಸವಿತ .ಒಕ್ಕೂಟದ ಅದ್ಯಕ್ಷರು, ಎಂ ಬಿ ಕೆ, ಕೃಷಿ ಸಖಿ, ಉದ್ಯೋಗ ಸಖಿ, ಪಶು ಸಖಿ, ಎಲ್ ಸಿ ಆರ್ ಪಿ,ಒಕ್ಕೂಟ ಸದಸ್ಯರು, ಉಪಸ್ಥಿತರಿದ್ದರು.




