ಸ್ವರ್ಗಸ್ಥರಾದ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಅವರಿಗೆ ನುಡಿನಮನ ಹಾಗೂ ಸಹಬೋಜನವು ಆಳ್ವಾಸ್ ಕಾಲೇಜಿನ ಕೃಷಿಸಿರಿ ವೇದಿಕೆಯಲ್ಲಿ ಶ್ರದ್ಧಾ-ಭಕ್ತಿಯಿಂದ ನೆರವೇರಿದೆ

ಈ ಸಂದರ್ಭ ನಿಟ್ಟೆ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ವಿನಯ ಹೆಗ್ಡೆ ಅವರು ನುಡಿನಮನ ಸಲ್ಲಿಸಿದ್ದಾರೆ. ಬಳಿಕ ಮಾತಾನಾಡಿದ ಇವರು, ಕೌಟುಂಬಿಕ ಜವಾಬ್ದಾರಿಯಿಂದ ತನ್ನ ವಿದ್ಯಾಭ್ಯಾಸ ಮೊಟುಕಾದರೂ, ವಿದ್ಯಾಕ್ಷೇತ್ರಕ್ಕೆ ಕೊಡುಗೆ ನೀಡಿ ಹಾಗೂ ವಿಶ್ವವಿದ್ಯಾಲಯಕ್ಕೆ ಸಮಾನಾಗಿ ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ತನ್ನ ಮಗನಿಗೆ ನೆರಳಾಗಿ ನಿಂತ ಆನಂದ ಆಳ್ವರ ವ್ಯಕ್ತಿತ್ವವು ಆದರ್ಶ ಹಾಗೂ ಅನುಕರಣೀಯ’ ಎಂದು ಹೇಳಿದ್ರು. ಇದೇ ವೇಳೆ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಾತನಾಡಿ, ‘ಹಿಂದೂ ಸಂಪ್ರದಾಯದ ಗರುಡ ಪುರಾಣದಲ್ಲಿ ಶ್ರಾದ್ಧ ಹಾಗೂ ಮೋಕ್ಷಗಳ ಕುರಿತ ವಿವರಗಳಿವೆ. ಧರ್ಮ ನಿಷ್ಠ, ಧ್ಯಾನಿ, ಯೋಗಾದಿ ವಿಚಾರಗಳಿಂದ ಮೋಕ್ಷ ಪಡೆಯುತ್ತಾರೆ ಎಂಬ ಉಲ್ಲೇಖವಿದೆ. ಅಂತಹ ಬದುಕನ್ನು ಆನಂದಿಸಿದವರು ‘ಆನಂದ ಆಳ್ವರು’ ಎಂದು ಹೇಳಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಕೃಷಿಸಿರಿ ವೇದಿಕೆಯಲ್ಲಿ ರಚಿಸಲಾದ ಪುಷ್ಪಾಲಂಕೃತ ಬೃಹತ್ ಮಂಟಪದಲ್ಲಿ ಇರಿಸಲಾದ ಮಿಜಾರುಗುತ್ತು ಆನಂದ ಆಳ್ವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆಗೈದಿದ್ದಾರೆ.



