ಜನ ಮನದ ನಾಡಿ ಮಿಡಿತ

Advertisement

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಮಾವೇಶದ ಪೂರ್ವಭಾವಿ ಸಭೆ

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ನಡೆಯುವ ಸಾಹಿತ್ಯ ಸಮಾವೇಶದ ಪೂರ್ವಭಾವಿ ಸಭೆಯು ಗಣಪತಿ ವಿದ್ಯಾ ಕೇಂದ್ರ ಪುಣ್ಯಕೋಟಿ ನಗರ ಕೈರಂಗಳ ಮುಡಿಪು ಇಲ್ಲಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ ಭಟ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ವಿವಿಧ ಸಾಹಿತ್ಯ ಪ್ರಸ್ತುತಿ ಹಾಗೂ ಸಾಂಸ್ಕೃತಿಕ ಗೋಷ್ಟಿಗಳೊಂದಿಗೆ ಕೈರಂಗಳ ಪುಣ್ಯಕೋಟಿ ನಗರ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಡಿಸೆಂಬರ್ 1 ರಂದು ನಡೆಸಲಾಗುವುದು ಎಂದು ಅಭಾಸಾಪ. ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಡಾ.ಸುರೇಶ ನೆಗಳಗುಳಿ ಪ್ರಕಟಿಸಿ ರಾಷ್ಟ್ರೀಯ ಚಿಂತನೆಯ ಕಾರ್ಯಕಮದ ಯಶಸ್ಸಿಗೆ ಸಾಹಿತ್ಯಾಭಿಮಾನಿಗಳ ಸಹಕಾರ ಅಗತ್ಯವೆಂದು ತಿಳಿಸಿದರು.


ಅ.ಭಾ.ಸಾ.ಪ.ನಿಕಟಪೂರ್ವ‌ ಅಧ್ಯಕ್ಷ ಜಯಾನಂದ ಪೆರಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಕವನ ಕಾವ್ಯ ವಾಚನ,ದೇಶ ಭಕ್ತಿ ಗೀತೆ,ಹಾಡುನೃತ್ಯ,ರಸಪ್ರಶ್ನೆ,ಪೌರಾಣಿಕ ಪಾತ್ರ ನಿರೂಪಣೆ,ವಿದ್ಯಾರ್ಥಿ ಕವಿಗೋಷ್ಟಿಗಳನ್ನು ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗಾಗಿ ಸಂಯೋಜಿಸಲಾಗುವುದು ಎಂದು‌ ಸಮಾವೇಶದ ರೂಪುರೇಷೆ ತಿಳಿಸಿದರು.
ಅಭಾಸಾಪ ಉಪಾಧ್ಯಕ್ಷ ಈಶ್ವರ ಪ್ರಸಾದ ಕನ್ಯಾನ,ಕೋಶಾಧಿಕಾರಿ ಪ್ರಶಾಂತ ಕಲ್ಲಡ್ಕ,ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಮೊಡಂಕಾಪು ಉಪಪ್ರಾಂಶು ಪಾಲೆ ರಮಣಿ ಭಂಡಾರಿ,ಕೈರಂಗಳ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆ.ಡಿ.ಲಮಾಣಿ, ಹಿರಿಯ ಶಿಕ್ಷಕ ಚಂದ್ರ ಕುಮಾರ್ ಉಪಸ್ಥಿತರಿದ್ದು ಸೂಕ್ತ ಸಲಹೆಗಳನ್ನಿತ್ತರು.ವಿದ್ಯಾಕೇಂದ್ರದ ಪ್ರಾಂಶುಪಾಲ ಶ್ರೀಹರಿ ಮಾರ್ಗದರ್ಶನ ದಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು.

Leave a Reply

Your email address will not be published. Required fields are marked *

ಮಂಗಳೂರು: ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿ ಕಾಮಗಾರಿ…!

ಉಡುಪಿ: ಕಾಪು ಕೋತಲಕಟ್ಟೆ ಜಂಕ್ಷನ್ ನಲ್ಲಿರುವ ಡೈವರ್ಷನ್ ಬಳಿ ಸರಣಿ ಅಪ*ಘಾತ…!

ಬಂಟ್ವಾಳ: ಅರ್ಭಿ- ದೆಂಬುಡೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಚಾಲನೆ…!

ಮಂಗಳೂರು: ಶ್ರೀ ಪರಮಾನಂದ ಸಾಲ್ಯಾನ್ ಅವರಿಗೆ ಈ ವರ್ಷದ ರಂಗಭಾಸ್ಕರ ಪ್ರಶಸ್ತಿ..!

ಉಳ್ಳಾಲ: ಆಹಾರ ಅರಸಿ ಬಂದ ನವಿಲಿಗೆ ವಿದ್ಯುತ್ ಕಂಬವೇ ಮರಣಬಲೆ….!

ಬಂಟ್ವಾಳ: ಮಂಚಿ – ಕೊಳ್ನಾಡು ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ಉದ್ಘಾಟನೆ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಎರಡು ಸರಕಾರಿ ಶಾಲೆಯಲ್ಲಿ ಶೂನ್ಯ ದಾಖಲಾತಿ….!

ಬಂಟ್ವಾಳ: ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಭೀಕರ ರಸ್ತೆ ಅಪ*ಘಾತ….!

ಮಂಗಳೂರು: ಎಂ.ಆರ್.ಜಿ.ಗ್ರೂಪ್ ಗೆ ಹಾರುವ ಹಕ್ಕಿ ಸೇರ್ಪಡೆ..!

error: Content is protected !!