ಪಕ್ಷಿಕೆರೆ : ಕೆಮ್ರಾಲ್ ಗ್ರಾಮ ಪಂಚಾಯತಿ, ಭಾರತೀಯ ಅಂಚೆ ಇಲಾಖೆ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ಸರಕಾರದ ಗೃಹಲಕ್ಷ್ಮೀ, ಅನ್ನಬಾಗ್ಯ ಹಾಗೂ ಇನ್ನಿತರ ಯೋಜನೆಗಳು ಸಾಕಾರಗೊಳ್ಳದ ಫಲಾನುಭವಿಗಳಿಗೆ ಐಪಿಪಿಬಿ ಖಾತೆ ತೆರೆಯುವ ಕಾರ್ಯಕ್ರಮ ಕೆಮ್ರಾಲ್ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಯ್ಯದ್ದಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸರ್ವಸದಸ್ಯರು, ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿ ಸೋಜ, ಕಾರ್ಯದರ್ಶಿ, ಎಸ್ಡಿಎಎ ಮತ್ತು ಸಿಬ್ಬಂದಿಗಳು, ಅಂಗನವಾಡಿ ಮೇಲ್ವಿಚಾರಕಿ ನಾಗರತ್ನ, ಅಂಗನವಾಡಿ ಕಾರ್ಯಕರ್ತೆಯರು, ಅಂಚೆ ಇಲಾಖೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು



