ಪಕ್ಷಿಕೆರೆ : ಕೆಮ್ರಾಲ್ ಗ್ರಾಮ ಪಂಚಾಯತಿನ 2023-24ನೇ ಸಾಲಿನ ಶೇ.5%ರ ಯೋಜನೆಯಡಿ ಕೆಮ್ರಾಲ್ ಗ್ರಾಮದ ಮುಲ್ಲೊಟ್ಟು ನಿವಾಸಿ ವಿಕಲಚೇತನರಾದ ಯಾದವ ಇವರಿಗೆ ಶ್ರವಣ ಸಾಧನವನ್ನು ಕೆಮ್ರಾಲ್ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಮಯ್ಯದ್ದಿ ಇವರು ನೀಡಿದರು.

ಈ ಸಂದರ್ಭದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸರ್ವಸದಸ್ಯರು, ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿ ಸೋಜ , ಕಾರ್ಯದರ್ಶಿ, ಎಸ್ಡಿಎಎ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.



