ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ ;ಕಟೀಲು ಸಮೀಪದ ಶ್ರೀಕೊಂಡೇಲ್ತಾಯ ದೈವಸ್ಥಾನ
ಶಿಲಾನ್ಯಾಸ ನೆರವೇರಿಸಿದ ಶಾಸಕರಾದ ಉಮಾನಾಥ ಕೋಟ್ಯಾನ್; ಪೂಜಾ ಕಾರ್ಯದಲ್ಲಿ ಹಲವಾರು ಭಕ್ತರು ಭಾಗಿ

ಬಜಪೆ: ಕಟೀಲು ಸಮೀಪದ ಶ್ರೀಕೊಂಡೇಲ್ತಾಯ ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ. ರಾಮಚಂದ್ರ ರಾವ್ ಸಿತ್ಲ ನೇತೃತ್ವದಲ್ಲಿ, ಧಾರ್ಮಿಕ ವಿಧಿವಿಧಾನಗಳ ಮೂಲಕ ಪೂಜಾ ಕಾರ್ಯ ಸಂಪನ್ನಗೊAಡಿದೆ. ಇನ್ನೂ ಈ ಪುಣ್ಯ ಕಾರ್ಯದಲ್ಲಿ ಜಯರಾಮ ಮುಕಾಲ್ದಿ ಕೊಡೆತ್ತೂರು, ನಿತಿನ್ ಶೆಟ್ಟಿ ಕೊಡೆತ್ತೂರುಗುತ್ತು, ಶ್ರೀಧರ ಶೆಟ್ಟಿ ಮಾಗಂದಡಿ ಸೇರಿದಂತೆ ನೂರಾರು ಭಕ್ತರು ಭಾಗಿಯಾಗಿದ್ರು.



