ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಸಂಕಲ್ಪಿಸಿರುವ ತಮ್ಮ ಚತುರ್ಥ ಪರ್ಯಾಯದ ಜಾಗತಿಕ ಮಟ್ಟದ ಧಾರ್ಮಿಕ ಸಂಕಲ್ಪ ಕೋಟಿಗೀತಾ ಲೇಖನ ಯಜ್ಞ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ಗೀತೋತ್ಸವ ಕಾರ್ಯಕ್ರಮ ಡಿಸೆಂಬರ್ 23 ಮತ್ತು 24 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆಯಲಿದ್ದು

ಈ ಹಿನ್ನೆಲೆಯಲ್ಲಿ ಗೀತಾ ಪ್ರಚಾರಕ್ಕಾಗಿ ನಿರ್ಮಿಸಲಾದ ಗೀತಾ ರಥಕ್ಕೆ ಚಾಲನೆ ನೀಡಲಾಯಿತು. ಬಿಜೆಪಿ ಎನ್.ಆರ್. ರಮೇಶ್ ಮುಖಂಡ ಗೀತಾ ರಥಕ್ಕೆ ಚಾಲನೆ ನೀಡಿದ್ದಾರೆ. ಕಾರ್ಯಾಧ್ಯಕ್ಷೆ ಡಾ. ಎಚ್.ಎಸ್. ಪ್ರೇಮ, ಸ್ವಾಮೀಜಿಯ ಆಪ್ತ ಕಾರ್ಯದರ್ಶಿ ಎಂ. ಪ್ರಸನ್ನಚಾರ್ಯ, ಬೆಂಗಳೂರು ಪುತ್ತಿಗೆ ಮಠದ ವ್ಯವಸ್ಥಾಪಕ ಎ.ಬಿ .ಕುಂಜಾರ್, ಶ್ರೀಧರ ಭಟ್, ಜ್ಯೋತಿಷಿ ನಾಗರಾಜ ನಕ್ಷತ್ರಿ, ಸಮಾಜ ಸೇವಕಿ ಮಾಲಿನಿ , ಹರಿಪ್ರಸಾದ್ , ವೆಂಕಟೇಶ್ ಭಟ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.



