ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳದ ಕಾಂತಾ ಬಾರೆ-ಬೂದಾಬಾರೆ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಸಾಮಾಜಿಕ ಸೇವಾ ಚಟುವಟಿಕೆಗಳ ಸಹಾಯಾರ್ಥವಾಗಿ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾಟ 2023 ಸಮಾರೋಪ ಕಾರ್ಯಕ್ರಮವು ಐಕಳ ಕಂಬಳದ ಮಂಜೊಟ್ಟಿ ಗದ್ದೆಯ ಬಳಿಯ ಮೈದಾನದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಎಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರೀಡಾಮನೋಭಾವದ ಮೂಲಕ ಗ್ರಾಮದಲ್ಲಿ ಕೀರ್ತಿವಂತರಾಗಿ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಐಕಳ ಗ್ರಾ.ಪಂ.ಉಪಾಧ್ಯಕ್ಷೆ ಜಯಲಕ್ಷ್ಮಿ ಪೂಜಾರಿ, ಸದಸ್ಯ ದಯೇಶ್ ಕೋಟ್ಯಾನ್, ಕಂಬಳ ಸಮಿತಿಯ ಚಿತ್ತರಂಜನ್ ಭಂಡಾರಿ, ಶರತ್ ಶೆಟ್ಟಿ, ಸುಧಾಮ ಶೆಟ್ಟಿ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ತ್ಯಾಗರಾಜ ಆಚಾರ್ಯ, ಸುಕುಮಾರ್ ಭಂಡಾರಿ, ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ತಾರಾನಾಥ ಶೆಟ್ಟಿ, ಹರೀಶ್ ಶೆಟ್ಟಿ ತಾಮಣಿ ಗುತ್ತು,ಸದಾನಂದ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

ಶಾಸಕ ಉಮಾನಾಥ ಕೋಟ್ಯಾನ್ ಪಂದ್ಯಾಟಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಆಶಕ್ತ ಕುಟುಂಬಗಳಿಗೆ ಸಹಾಯ ಧನ,ಸಾಧಕರಿಗೆ ಸನ್ಮಾನ ಹಾಗೂ ವಾಲಿಬಾಲ್ ಪಂದ್ಯಾಟದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಯಿತು.
ವೈದ್ಯನಾಥ ಫ್ರೆಂಡ್ಸ್ ಐಕಳ (ಪ್ರ), ಕೆಬಿಸಿ ಐಕಳ (ದ್ವಿ), ಟೀಮ್ ಶಾಸ್ತ (ತೃ), ಸರ್ವೋದಯ ಫ್ರೆಂಡ್ಸ್ ಕಲ್ಲಮುಂಡ್ಕೂರು(ಚತುರ್ಥ), ಉತ್ತಮ ಆಲ್ ರೌಂಡರ್ – ಪ್ರಶಾಂತ್ (ವೈದ್ಯನಾಥ ತಂಡ), ಬೆಸ್ಟ್ ಅಟ್ಯಾಕರ್, ಲೆಬ್ರೋ -ಅಕ್ಷಯ್ (ಕೆ ಬಿ ಸಿ ಐಕಳ), ಬೆಸ್ಟ್ ಪಾಸರ್ ಜಯವರ್ಧನ (ವೈದ್ಯನಾಥ) ಪ್ರಶಸ್ತಿ ಗಳಿಸಿದರು. ಚೇತನ್ ಧನ್ಯವಾದ ಅರ್ಪಿಸಿದರು,ಶ್ರೀಶ ಐಕಳ ನಿರೂಪಿಸಿದರು



