ಜನ ಮನದ ನಾಡಿ ಮಿಡಿತ

Advertisement

ಹಾಲು ಅಮೃತವಲ್ಲ, ವಿಷ.. ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆ ಪರೀಕ್ಷೆಯಲ್ಲಿ ಬೆಚ್ಚಿ ಬೀಳಿಸೋ ಸತ್ಯ ಬಹಿರಂಗ..!

ರಾಜ್ಯದಲ್ಲಿ ಪ್ರತಿನಿತ್ಯ ಸರಬರಾಜು ಆಗುತ್ತಿರುವ ಬಹುತೇಕ ಹಾಲು ಕಲಬೆರಕೆ ಎಂಬ ಆಘಾತಕಾರಿ ಮಾಹಿತಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ತಪಾಸಣೆಯಲ್ಲಿ ಬಹಿರಂಗವಾಗಿದೆ.

ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಳಿ) ಪ್ರಯೋಗಾಲಯದಲ್ಲಿ ನಡೆದ ಪರೀಕ್ಷೆಯಲ್ಲಿ ಹಾಲು ಕಲಬೆರಕೆ ಇರೋದು ದೃಢಪಟ್ಟಿತ್ತು. ಹೀಗಾಗಿ ಇಡೀ ರಾಜ್ಯದಾದ್ಯಂತ ಖಾಸಗಿ ಕಂಪನಿಗಳ ಹಾಲನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಪ್ರಿಲ್, ಮೇ, ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್​ನಲ್ಲಿ ಹಾಲು ಪರೀಕ್ಷೆ ಮಾಡಲಾಗಿ, ಈ ವೇಳೆ ವಿಷಕಾರಿ ಅಂಶ ಪತ್ತೆಯಾಗಿದೆ.

ರಾಜ್ಯದಲ್ಲಿ ನಡೆದ 44 ಹಾಲಿ ಬ್ರ್ಯಾಂಡ್​ಗಳ 259 ಹಾಲಿನ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಹಾಲಿನ ಗುಣಮಟ್ಟದ ಪರೀಕ್ಷೆಯಿಂದ ಬೆಚ್ಚಿಬೀಳುವ ವಿಚಾರ ಬಹಿರಂಗ ಆಗಿದೆ. ಸೇವಿಸಲು ಯೋಗ್ಯವಲ್ಲದ ವಿಷಯುಕ್ತ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಎಫ್ಎಸ್ಎಸ್ಎಐ (ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ)ನ ಮಾನದಂಡಕ್ಕಿಂತ ಕಡಿಮೆ ಮಾನದಂಡದ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸರಬರಾಜು ಆಗುತ್ತಿರುವ ಹಾಲಿನಲ್ಲಿ ಶೇಕಡಾ 4.63 ರಷ್ಟು ಕಲಬೆರಕೆ ಇದ್ದರೆ, ಶೇಕಡಾ 42.47 ರಷ್ಟು ಹಾಲು ಎಫ್ಎಸ್ಎಸ್ಎಐ ಮಾನದಂಡಕ್ಕಿಂತ ಕಡಿಮೆ ಇದೆ ಎಂದು ವರದಿ ಹೇಳಿದೆ.

ಆದಿತ್ಯ, ಆರೋಗ್ಯ, ದೊಡ್ಲ, ಶ್ರೀಕೃಷ್ಣ ತಿರುಮಲ, ಕೃಷ್ಣಾ ಡೇರಿ ಸೇರಿದಂತೆ ಅನೇಕ ಮಾದರಿಯ ಹಾಲನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆ ವೇಳೆ ಹಾಲಿನಲ್ಲಿ ಆರೋಗ್ಯ ಹಾಳು ಮಾಡುವ ವಿಷಕಾರಿ ಅಂಶ ಪತ್ತೆಯಾಗಿದೆ. ಮಾಲ್ಟೊಡೆಕ್ಸ್ಟ್ರಿನ್ (maltodextrin), ಅಫ್ಲಾಟಾಕ್ಸಿನ್ (Aflatoxin) ಅಂಶಗಳು ಇರೋದು ಪತ್ತೆಯಾಗಿವೆ. ಹಾಲಿನ ಜೀವಿತಾವಧಿ ಹೆಚ್ಚಿಸಲು ಸೋಡಿಯಂ, ಸಕ್ಕರೆ, ಉಪ್ಪು ಬಳಕೆ ಮಾಡಲಾಗುತ್ತಿದೆ ಅನ್ನೋ ವಿಚಾರ ಬಯಲಾಗಿದೆ.

ಮಾಲ್ಟೊಡೆಕ್ಸ್ಟ್ರಿನ್: ಇದನ್ನು ಆಹಾರದಲ್ಲಿ ಬಳಸುತ್ತಾರೆ, ಆದರೆ ಹಾಲಿನಲ್ಲಿ ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಹಾಲಿನ ಜೀವಿತಾವಧಿ ಹೆಚ್ಚಿಸಲು ಮಾಲ್ಟೊಡೆಕ್ಸ್ಟ್ರಿನ್ ಬಳಕೆ ಮಾಡಲಾಗುತ್ತದೆ. ಇದರ ಬಳಕೆಯಿಂದ ಅಲರ್ಜಿ, ಹೊಟ್ಟೆಯ ಸಮಸ್ಯೆಗಳು, ವಾಂತಿ, ಗ್ಯಾಸ್​ಸ್ಟ್ರಿಕ್ ಆಗಲಿದೆ. ಮೇದೋಜೀರಕ ಗ್ರಂಥಿಯ ಮೇಲೆ ವ್ಯತಿರಿಕ್ತ ಪರಿಣಾಮ, ಮಧುಮೇಹ ಹೆಚ್ಚಾಗುವ ಸಾಧ್ಯತೆ ಇದೆ.

ಅಫ್ಲಾಟಾಕ್ಸಿನ್: ಪ್ರಾಣಿಗಳಿಗೆ ನೀಡುವ ಅಹಾರದಿಂದ ಹಾಲಿನಲ್ಲಿ ಬರಬಹುದು. ಅಫ್ಲಾಟಾಕ್ಸಿನ್ ಮನುಷ್ಯನ ದೇಹ ಸೇರಿದರೆ ವಾಕರಿಕೆ, ವಾಂತಿ, ಹೊಟ್ಟೆನೋವು, ಸ್ನಾಯು ಸೆಳೆತ, ಯಕೃತ್ತಿನಲ್ಲಿ ಹುಣ್ಣು, ಬೆಳವಣಿಗೆ ಕುಂಠಿತ, ಸಿರೋಸಿಸ್ ಅಲ್ಲದೇ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳಿಗೆ ಅಹ್ವಾನ ನೀಡಬಲ್ಲದು. ಇನ್ನು ಉಪ್ಪು ಸಕ್ಕರೆ ಸೋಡಿಯಂ ಸೋಡಾದಿಂದ ಆಗುವ ಪರಿಣಾಮ ಎಲ್ಲರಿಗೂ ಗೊತ್ತಿರುವ ವಿಚಾರ.

  • ಮಾಲ್ಟೊಡೆಕ್ಸ್ಟ್ರಿನ್ ಪತ್ತೆಯಾದ ಹಾಲಿನ ಮಾದರಿಗಳು: ಆರೋಗ್ಯ, ದೊಡ್ಲ, ಗೋವಿಂದ, ಶ್ರೀಚಕ್ರ
  • ಅಫ್ಲಾಟಾಕ್ಸಿನ್ ಪತ್ತೆಯಾದ ಹಾಲಿನ ಮಾದರಿಗಳು: ದೊಡ್ಲ, ತಿರುಮಲ
  • ಸೋಡಿಯಂ, ಸಕ್ಕರೆ, ಉಪ್ಪು ಪತ್ತೆಯಾದ ಹಾಲಿನ ಮಾದರಿಗಳು: ದೊಡ್ಲ, ಆಹಾ, ಶ್ರೀನಿವಾಸ, ಮುಕುಂದ, ಶ್ರೀಚಕ್ರ,
  • ಗುಣಮಟ್ಟದಲ್ಲಿ ಕಡಿಮೆ ಇರುವ ಹಾಲಿನ ಡೇರಿಗಳು: ಆದಿತ್ಯ, ಆರೋಗ್ಯ, ದೊಡ್ಲ, ತಿರುಮಲ, ಹೆರಿಟೇಜ್, ಜೆರ್ಸಿ, ಗೋವಿಂದ, ಆರ್ನಾ, ಕೃಷ್ಣಾ ಡೈರಿ, ಆಹಾ, ಶ್ರೀನಿವಾಸ, ಫಾರ್ಮಗೇಟ್, ಮುಕುಂದ, ಖುಷಿ, ಶ್ರೀಚಕ್ರ, ಗಾಯತ್ರಿ, ರಾಧಿಕಾ ಮಿಲ್ಕ್, ವಾರ್ನಾ ಪ್ರೆಶ್, ಶಿವಾ ಮಿಲ್ಕ್, ಸಂಗಮ್ ಶ್ರೀಕೃಷ್ಣ, ಪ್ರಚೀತಿ ಮಿಲ್ಕ್, ಎ1 ಗೋಪಿ, ಸ್ಫೂರ್ತಿ, ಸೋನೈ ಮಿಲ್ಕ, ರಾಜಹಂಸ ದೂಧ್, ದೂಧ್ ಫಂಡರಿ, ಗೋತುಯಾ, ಊರ್ಜಾ ಮಿಲ್ಕ್, ಲಾಯೂರ್ ಮಿಲ್ಕ್, ಗೋವರ್ಧನ್ ಪ್ರೆಶ್ ಮಿಲ್ಕ್ ಗುಡ್ ಮಾರ್ನಿಂಗ್, ಕೋರೆಗಾವೆ, ಗೋಕುಲ್ ಕ್ಲಾಸಿಕ್, ವೈಟ್ ಗೋಲ್ಡ್, ನಿರ್ಮಲಾ

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!