ದಕ್ಷಿಣ ಕನ್ನಡ : ಶ್ರೀ ವಿಠೋಬ ರುಕುಮಾಯಿ ದೇವಸ್ಥಾನ ಶ್ರೀನಿವಾಸಪುರ ಗುಂಡ್ಯಕ್ಕ ಮೂಡಬಿದಿರೆ ಇಲ್ಲಿ ಭಜನಾ ಸಪ್ತಾಹದ ಮಂಗಲೋತ್ಸವ ಹಾಗೂ ವಿಶೇಷ ಮಹಾಸಭೆಯು ನಡೆಯಿತು.
ಪಾಂಡುರಂಗ ಭಟ್ ಸಪ್ರೆ, ರಮೇಶ್ ಭಟ್ ಪರಾಡ್ಕರ್, ಇವರ ಮಾರ್ಗದರ್ಶನದಲ್ಲಿ ಏರ್ಪಲೆ ಸುಬ್ರಹ್ಮಣ್ಯ ಭಟ್ಟ ಪರಾಡ್ಕರ್ ಇವರ ಧಾರ್ಮಿಕ ಮಾರ್ಗದರ್ಶನದೊಂದಿಗೆ ಕ್ರಮಬದ್ಧವಾಗಿ ಕಳೆದ ಕೆಲವು ದಿನಗಳಿಂದ ನಡೆಸಿಕೊಂಡು ಬರುತ್ತಿದ್ದ ಧಾರ್ಮಿಕ ವಿಧಿ ವಿಧಾನಗಳು ಸಹಿತ ಭಜನೆ ಇದರ ಮಂಗಲೋತ್ಸವ ಮತ್ತು ಇತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯುಕ್ತವಾಗಿ ಯಶಸ್ವಿಯಾಗಿ ಸಂಪನ್ನಗೊಂಡಿತು.



ಜೊತೆಗೆ ಇಂದು ನಡೆದ ವಿಶೇಷ ಮಹಾ ಸಭೆಯಲ್ಲಿ ಸಮಾಜದ ವಿಶೇಷ ಸಾಧಕರಿಗೆ, ಸಮಾಜದ ಹಿರಿಯರಿಗೆ ಗೌರವ ಸನ್ಮಾನ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು ಮಹಾಸಭೆಯಲ್ಲಿ ಗಿರಿಧರ ಭಟ್ ಪರಾಡ್ಕರ್, ರಾಮಚಂದ್ರ ಭಟ್ಟ ನಾಟೇಕರ್, ಚಂದ್ರಶೇಖರ ಭಟ್ ಕಟೀಲು, ರಾಮಚಂದ್ರ ಪಂಡಿತ್ ಕಾಂತಾವರ, ಸದಾನಂದ ಚಿಂಚಲ್ಕರ್ ಕೊಪ್ಪಂದಡ್ಕ, ಪ್ರಭಾಕರ ಭಾಟೆ ಗುಂಡ್ಯಡ್ಕ, ಪಾಂಡುರಂಗ ಲಾಗ್ವಾನ್ಕರ್ ಪರ್ಕಳ, ಗಣಪತಿ ದೇವ್ ಜಿ, ಗೀತಾ ಪಿ ಸಪ್ರೆ, ಕೆ ಆರ್ ಪಂಡಿತ್, ಪ್ರಭಾಕರ ಪರಾಡ್ಕರ್, ಶ್ರೀಕಾಂತ ರಾವ್, ಸುನಿಲ್ ಗರ್ದೆ, ಅಶೋಕ ಮುಂಡಕ್ಕಾನ , ಸಹಿತ ಸಮಾಜದ ಭಾಂಧವರು, ಹಿತೈಷಿಗಳು, ಉಪಸ್ಥಿತರಿದ್ದರು.








