ಬಪ್ಪನಾಡು ಮುಚ್ಚೂರು ಲಯನ್ಸ್ ಕ್ಲಬ್ ಮುಚ್ಚುರು ನೀರುಡೆಯ ಆತಿಥ್ಯದಲ್ಲಿ ಜರಗಿದ ಪ್ರಾಂತ್ಯ 12,ವಲಯ 1 ರ ಲಯನ್ಸ್ ಕ್ಲಬ್ ಗಳಿಗೆ ಪ್ರಾಂತ್ಯ ಅಧ್ಯಕ್ಷರ ಅಧಿಕೃತ ಬೇಟಿ ಕಾರ್ಯಕ್ರಮ ಮುಚ್ಚುರಿನ ಮಿಥಿಲಸಭಾ ಭವನದಲ್ಲಿ ಜರುಗಿತು.

ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಲಯನ್ಸ್ ಕ್ಲಬ್ ಮುಚ್ಚೂರು ನೀರುಡೆ, ಲಯನ್ಸ್ ಕ್ಲಬ್ ಗುರುಪುರ ಕೈಕಂಬ, ಲಯನ್ಸ್ ಕ್ಲಬ್ ಬೆಳುವಾಯಿಗಳಿಗೆ ಪ್ರಾಂತ್ಯ ಅಧ್ಯಕ್ಷರಾದ ಹೆರಾಲ್ಡ್ ತೌರೊ ರವರ ಅಧಿಕೃತ ಭೇಟಿ ಸಮಾರಂಭವು ಜರುಗಿತು. ಸಮಾರಂಭದ ಆಥಿತ್ಯವಹಿಸಿಕೊಂಡ ಮುಚ್ಚೂರು ಅಧ್ಯಕ್ಷರಾದ ರಾಯನ್ ರೋಶನ್ ಡಿಸೋಜಾ ಸ್ವಾಗತಿಸಿದರು. ಮೇಲ್ವಿನ್ ಸಲ್ದನ ರವರು ಪ್ರಾಂತ್ಯ ಅಧ್ಯಕ್ಷರ ಪರಿಚಯವನ್ನು ಸಭೆಯ ಮುಂದೆ ಇಟ್ಟರು ತರುವಾಯ ಮಾತನಾಡಿದ ಪ್ರಾಂತ್ಯ ಅಧ್ಯಕ್ಷರು ಗ್ರಾಮೀಣ ಪ್ರದೇಶದ ಕ್ಲಬ್ ಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಗೂ ಆರೋಗ್ಯ ಶಿಬಿರ , ನೇತ್ರ ತಪಾಸಣಾ ಶಿಬಿರ ,ಮುಂತಾದ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಪ್ರದೇಶದ ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ಜನರ ಕಷ್ಟಕ್ಕೆ ಸ್ಪಂದಿಸಿ ಪರಿಸರದಲ್ಲಿ ಮನೆಮಾತಾಗಿದೆ ಈ ಮೂಲಕ ಅಂತಾರಾಷ್ಟ್ರೀಯ ಸಂಸ್ಥೆಯ ಹೆಸರು ಉತ್ತುಂಗಕ್ಕೇರಿದೆ ಎಂದರು. ಬಳಿಕ ಬಪ್ಪನಾಡಿನ ಸೇವಾ ಕಾರ್ಯಕ್ರಮ ಅಂಗವಾಗಿ ಓರ್ವ ವಿದ್ಯಾರ್ಥಿನಿಗೆ ಲ್ಯಾಪ್ಟಾಪ್ ಹಾಗೂ ಮೂರು ಜನ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕವನ್ನು ಪಾವತಿಸಲು ಸಹಯಧನ ನೀಡಲಾಯಿತು , ವಲಯ ಅಧ್ಯಕ್ಷೆ ಪ್ರತಿಭಾ ಹೆಬ್ಬಾರ್ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ ಹೆಬ್ಬಾರ್ ಅಧ್ಯಕ್ಷ ಸುಧೀರ್ ಬಾಳಿಗ ರಾಯನ್ ರೋಶನ್ ಡಿಸೋಜ, ಸುನಿಲ್ ಲಾಯ್ಡ್ ಡಿ ಮೇಲ್ಲೊ ಮೊದಲಾದವರು ಉಪಸ್ಥಿತರಿದ್ದರು



