ಜನ ಮನದ ನಾಡಿ ಮಿಡಿತ

Advertisement

ಕರಾವಳಿಯಲ್ಲಿ ಮತ್ಸ್ಯ ಕ್ಷಾಮ ; ಮೀನಿನ ಪೂರೈಕೆ ಕಡಿಮೆಯಾಗಿ ದರ ಸಿಕ್ಕಾಪಟ್ಟೆ ಏರಿಕೆ

ಮಲ್ಪೆ: ಏಕಾಏಕಿ ಹೆಚ್ಚಾದ ಸೆಕೆ, ಹವಾಮಾನದ ವೈಪರೀತ್ಯದಿಂದಾಗಿ ಕರಾವಳಿಯಲ್ಲಿ ಮತ್ಸ್ಯ ಕ್ಷಾಮ ಉಂಟಾಗಿದ್ದು, ಮೀನುಗಾರಿಕೆ ಕ್ಷೇತ್ರದಲ್ಲಿ ಸಂಕಷ್ಟದ ಸನ್ನಿವೇಶ ಸೃಷ್ಟಿಯಾಗಿದೆ. ಇದರಿಂದ ಮೀನಿನ ಪೂರೈಕೆ ಕಡಿಮೆಯಾಗಿ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ.

ಗ್ರಾಹಕರು ಹೆಚ್ಚು ಇಷ್ಟ ಪಡುವ ಬಂಗುಡೆ, ಬೂತಾಯಿ ಜತೆಗೆ ಅಂಜಲ್‌, ಪಾಂಪ್ರಟ್‌ ಮೀನಿನ ಪೂರೈಕೆಯಲ್ಲಿ ಕೊರತೆ ಕಾಣಿಸಿದ್ದು ಮಾರುಕಟ್ಟೆಯಲ್ಲಿ ಇಂತಹ ಮೀನುಗಳ ದರವೂ ಎರಡು ಪಟ್ಟು ಏರಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದರ ಬಲು ದುಬಾರಿ ಎನ್ನುತ್ತಾರೆ ಮಲ್ಪೆ ಕನ್ನಿ ಮೀನುಗಾರರ ಸಂಘದ ಅಧ್ಯಕ್ಷ ದಯಾಕರ ವಿ. ಸುವರ್ಣ.

ಬಂಗುಡೆ ದೊಡ್ಡ ಗಾತ್ರದ ಮೀನು ಕೆ.ಜಿ. ಒಂದಕ್ಕೆ 250 ರೂ. ಇದೆ. ಕಳೆದ ಬಾರಿ 150-180 ರೂ. ಅಸುಪಾಸಿನಲ್ಲಿ ಇತ್ತು. ಬೂತಾಯಿ ಮಧ್ಯಮ ಗಾತ್ರದ್ದಕ್ಕೆ 200 ರೂ. ಇದೆ. ದೊಡ್ಡ ಗಾತ್ರದ್ದು ಸಿಗುವುದೇ ಅಪರೂಪ. ಅಂಜಲ್‌ ದರ ಕೆ.ಜಿ.ಗೆ 800ರಿಂದ 1 ಸಾವಿರ ರೂ. ವರೆಗೆ ಇದೆ. ಸಣ್ಣ ಗಾತ್ರದ ಅಂಜಲ್‌ ಕೆಜಿಗೆ 600ರಿಂದ 650 ರೂ.ಗೆ ಇದೆ. 800ರಿಂದ 900 ರೂ. ತನಕ ಇದ್ದ ದೊಡ್ಡ ಪಾಂಪ್ರಟ್‌ ಪ್ರಸ್ತುತ 1, 400 ರೂ. ದಾಟಿದೆ. ಕೊಡ್ಡಯಿ ಕಲ್ಲುರು ದೊಡ್ಡದು 400, ಸಣ್ಣದು 250 ರೂ. ಇದೆ. ವಿವಿಧ ಬಗೆಯ ಸಿಗಡಿಗೆ 650 ರೂ., 500 ರೂ., 350 ರೂ. ಇದೆ. ಬೊಳಂಜಿರ್‌ ಕೆ.ಜಿ.ಗೆ 600, ತೊರಕೆ 400 ರೂ. ಇದೆ.

ಮೀನುಗಾರರ ಪ್ರಕಾರ ಒಳ್ಳೆಯ ಗಾಳಿ, ನೀರು ಇದ್ದರೆ ಮಾತ್ರ ಮೀನುಗಳು ಇರುತ್ತವೆ. ಇಲ್ಲದಿದ್ದರೆ ವಲಸೆ ಹೋಗುತ್ತವೆ. ಜತೆಗೆ ಕರಾವಳಿಯಲ್ಲಿ ಈಗ ಹೆಚ್ಚಿನ ಬಿಸಿಲಿನ ಪರಿಣಾಮ ಮೀನುಗಳು ತಂಪು ಪ್ರದೇಶವನ್ನು ಆರಿಹೋಗುತ್ತವೆ. ಹಾಗಾಗಿ ಮೀನು ಸರಿಯಾಗಿ ಸಿಗುತ್ತಿಲ್ಲ ಎನ್ನುತ್ತಾರೆ ಮೀನುಗಾರ ಕೃಷ್ಣ ಎಸ್‌. ಸುವರ್ಣ.

ಮೀನಿನ ಬರದಿಂದಾಗಿ ಬೋಟುಗಳು ದಡ ಸೇರಿವೆ. ಈಗ ಎಷ್ಟು ದುಡ್ಡು ಕೊಟ್ಟರೂ ಉತ್ತಮ ಜಾತಿಯ ಮೀನು ಸಿಗುತ್ತಿಲ್ಲ ಎನ್ನುವ ಪರಿಸ್ಥಿತಿ. ಬಹುತೇಕ ಮೀನು ಮಾರಾಟದ ಮಹಿಳೆಯರು ಮಾರಾಟ ಮಾಡಲು ಮೀನು ಸಿಗದೇ ಮನೆ ಯಲ್ಲೇ ಕುಳಿತುಕೊಳ್ಳುವಂತಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!