ಮಲ್ಪೆ: ಏಕಾಏಕಿ ಹೆಚ್ಚಾದ ಸೆಕೆ, ಹವಾಮಾನದ ವೈಪರೀತ್ಯದಿಂದಾಗಿ ಕರಾವಳಿಯಲ್ಲಿ ಮತ್ಸ್ಯ ಕ್ಷಾಮ ಉಂಟಾಗಿದ್ದು, ಮೀನುಗಾರಿಕೆ ಕ್ಷೇತ್ರದಲ್ಲಿ ಸಂಕಷ್ಟದ ಸನ್ನಿವೇಶ ಸೃಷ್ಟಿಯಾಗಿದೆ. ಇದರಿಂದ ಮೀನಿನ ಪೂರೈಕೆ ಕಡಿಮೆಯಾಗಿ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ.
ಗ್ರಾಹಕರು ಹೆಚ್ಚು ಇಷ್ಟ ಪಡುವ ಬಂಗುಡೆ, ಬೂತಾಯಿ ಜತೆಗೆ ಅಂಜಲ್, ಪಾಂಪ್ರಟ್ ಮೀನಿನ ಪೂರೈಕೆಯಲ್ಲಿ ಕೊರತೆ ಕಾಣಿಸಿದ್ದು ಮಾರುಕಟ್ಟೆಯಲ್ಲಿ ಇಂತಹ ಮೀನುಗಳ ದರವೂ ಎರಡು ಪಟ್ಟು ಏರಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದರ ಬಲು ದುಬಾರಿ ಎನ್ನುತ್ತಾರೆ ಮಲ್ಪೆ ಕನ್ನಿ ಮೀನುಗಾರರ ಸಂಘದ ಅಧ್ಯಕ್ಷ ದಯಾಕರ ವಿ. ಸುವರ್ಣ.
ಬಂಗುಡೆ ದೊಡ್ಡ ಗಾತ್ರದ ಮೀನು ಕೆ.ಜಿ. ಒಂದಕ್ಕೆ 250 ರೂ. ಇದೆ. ಕಳೆದ ಬಾರಿ 150-180 ರೂ. ಅಸುಪಾಸಿನಲ್ಲಿ ಇತ್ತು. ಬೂತಾಯಿ ಮಧ್ಯಮ ಗಾತ್ರದ್ದಕ್ಕೆ 200 ರೂ. ಇದೆ. ದೊಡ್ಡ ಗಾತ್ರದ್ದು ಸಿಗುವುದೇ ಅಪರೂಪ. ಅಂಜಲ್ ದರ ಕೆ.ಜಿ.ಗೆ 800ರಿಂದ 1 ಸಾವಿರ ರೂ. ವರೆಗೆ ಇದೆ. ಸಣ್ಣ ಗಾತ್ರದ ಅಂಜಲ್ ಕೆಜಿಗೆ 600ರಿಂದ 650 ರೂ.ಗೆ ಇದೆ. 800ರಿಂದ 900 ರೂ. ತನಕ ಇದ್ದ ದೊಡ್ಡ ಪಾಂಪ್ರಟ್ ಪ್ರಸ್ತುತ 1, 400 ರೂ. ದಾಟಿದೆ. ಕೊಡ್ಡಯಿ ಕಲ್ಲುರು ದೊಡ್ಡದು 400, ಸಣ್ಣದು 250 ರೂ. ಇದೆ. ವಿವಿಧ ಬಗೆಯ ಸಿಗಡಿಗೆ 650 ರೂ., 500 ರೂ., 350 ರೂ. ಇದೆ. ಬೊಳಂಜಿರ್ ಕೆ.ಜಿ.ಗೆ 600, ತೊರಕೆ 400 ರೂ. ಇದೆ.
ಮೀನುಗಾರರ ಪ್ರಕಾರ ಒಳ್ಳೆಯ ಗಾಳಿ, ನೀರು ಇದ್ದರೆ ಮಾತ್ರ ಮೀನುಗಳು ಇರುತ್ತವೆ. ಇಲ್ಲದಿದ್ದರೆ ವಲಸೆ ಹೋಗುತ್ತವೆ. ಜತೆಗೆ ಕರಾವಳಿಯಲ್ಲಿ ಈಗ ಹೆಚ್ಚಿನ ಬಿಸಿಲಿನ ಪರಿಣಾಮ ಮೀನುಗಳು ತಂಪು ಪ್ರದೇಶವನ್ನು ಆರಿಹೋಗುತ್ತವೆ. ಹಾಗಾಗಿ ಮೀನು ಸರಿಯಾಗಿ ಸಿಗುತ್ತಿಲ್ಲ ಎನ್ನುತ್ತಾರೆ ಮೀನುಗಾರ ಕೃಷ್ಣ ಎಸ್. ಸುವರ್ಣ.
ಮೀನಿನ ಬರದಿಂದಾಗಿ ಬೋಟುಗಳು ದಡ ಸೇರಿವೆ. ಈಗ ಎಷ್ಟು ದುಡ್ಡು ಕೊಟ್ಟರೂ ಉತ್ತಮ ಜಾತಿಯ ಮೀನು ಸಿಗುತ್ತಿಲ್ಲ ಎನ್ನುವ ಪರಿಸ್ಥಿತಿ. ಬಹುತೇಕ ಮೀನು ಮಾರಾಟದ ಮಹಿಳೆಯರು ಮಾರಾಟ ಮಾಡಲು ಮೀನು ಸಿಗದೇ ಮನೆ ಯಲ್ಲೇ ಕುಳಿತುಕೊಳ್ಳುವಂತಾಗಿದೆ.
ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು…
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ…
ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಲು ಸುಪಾರಿ ನೀಡಿದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಸೇರಿ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ…
ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಬಿಳಿ ಬಣ್ಣದ ಸ್ವೀಫ್ಟ್ ಡಿಸೈರ್ ಕಾರಿನಲ್ಲಿ ಹಿಂಸಾತ್ಮಕವಾಗಿ ಎಳೆದುಕೊಂಡು ಹೋದ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಹಾಗೂ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆ ಇದರ…
ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದ ರಾಜಾಜಿ…