ಮುಲ್ಕಿ: ಇಲ್ಲಿಗೆ ಸಮೀಪದ ಅಂಗರಗುಡ್ಡೆ ಶ್ರೀರಾಮ್ ಫ್ರೆಂಡ್ಸ್ ವತಿಯಿಂದ ಬಿಜೆಪಿ ನಾಯಕ ದಿ. ಸುಖಾನಂದ ಶೆಟ್ಟಿ ಸ್ಮರಣಾರ್ಥ ಸುಮಾರು ನೂರಕ್ಕಿಂತಲೂ ಹೆಚ್ಚು ಅಶಕ್ತ ಕುಟುಂಬಗಳಿಗೆ ಸಹಾಯ ಹಸ್ತ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ ಶ್ರೀರಾಮ ಭಜನಾ ಮಂದಿರ ಅಂಗರಗುಡ್ಡೆಯಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ವಹಿಸಿದ್ದರು .
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲು ಮಾತನಾಡಿ ಹಿಂದೂ ಸಮಾಜದ ರಕ್ಷಣೆಗೆ ಹೋರಾಟ ನಡೆಸಿದ ದಿ. ಸುಖಾನಂದ ಶೆಟ್ಟಿ ರವರ ಆದರ್ಶಗಳು ನಮಗೆಲ್ಲ ಮಾದರಿಯಾಗಿದ್ದು ಅವರ ನೆನಪಿನಲ್ಲಿ ಅಸಹಾಯಕರಿಗೆ ಸಹಾಯ ಹಸ್ತ ಅಭಿನಂದನೀಯ ಎಂದರು.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ ಪಿ ಸುದರ್ಶನ್,ಮಂಡಲಾಧ್ಯಕ್ಷ ಸುನಿಲ್ ಆಳ್ವ, ಬಿಜೆಪಿ ನಾಯಕರಾದ ಈಶ್ವರ ಕಟೀಲು, ಕಸ್ತೂರಿ ಪಂಜ, ಭುವನಾಭಿರಾಮ ಉಡುಪ , ಕೇಶವ ಕರ್ಕೇರಾ, ಜಯಾನಂದ್ ಮುಲ್ಕಿ , ವಿನೋದ್ ಸಾಲ್ಯಾನ್ ಬೆಳ್ಳಾಯರು, ಅತಿಕಾರಿಬೆಟ್ಟು ಗ್ರಾ.ಪಂ. ಅಧ್ಯಕ್ಷ ಮನೋಹರ ಕೋಟ್ಯಾನ್ , ಸದಸ್ಯ ಕೃಷ್ಣ ಶೆಟ್ಟಿಗಾರ್, ಮುಲ್ಕಿ ನ.ಪಂ. ಸದಸ್ಯರಾದ ಸುಭಾಷ್ ಶೆಟ್ಟಿ, ಸತೀಶ್ ಅಂಚನ್, ಶೈಲೇಶ್,ಮಾಜೀ ತಾ.ಪಂ.ಸದಸ್ಯ ದಿವಾಕರ್ ಕರ್ಕೇರ,ಉದ್ಯಮಿ ಸ್ಟ್ಯಾನಿ ಪಿಂಟೋ ಕಟೀಲು, ಪ್ರವೀಣ್ ಆರ್ ಶೆಟ್ಟಿ, ಮುಂಬೈ, ಕಾರ್ಯಕ್ರಮ ಸಂಘಟಕ ಜೀವನ್ ಶೆಟ್ಟಿ, ಸುಧೀರ್ ಶೆಟ್ಟಿ ಅಂಗರಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಅಸಹಾಯಕ ಕುಟುಂಬಗಳಿಗೆ ಸಹಾಯ ಹಸ್ತ ನೀಡಲಾಯಿತು
ಬಳಿಕ ಹಗ್ಗ ಜಗ್ಗಾಟ ಪಂದ್ಯಾಟ ನಡೆಯಿತು.







