ಮೂಲ್ಕಿ:ಕೇOದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಇಂಡಿಯನ್ ರೋಡ್ ಕಾಂಗ್ರೆಸ್ ಇದರ 82ನೇ ಸಭೆ ಗುಜರಾತ್ ಗಾಂಧಿ ನಗರದ ಮಹಾತ್ಮ ಮಂದಿರ ಕನ್ವೆನ್ಷನ್ ಮತ್ತು ಎಕ್ಸಿಹಿಬಿಷನ್ ಸೆಂಟರ್‌ನಲ್ಲಿ ನಡೆಯಿತು.


ಸಭೆಯಲ್ಲಿ ಶಾರದಾ ಇನ್ಫ್ರಾ ಡಿಸೈನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿ ಇದರ ಸ್ಥಾಪಕ ಅಧ್ಯಕ್ಷರಾದ ಹಾಗೂ ಇಂಡಿಯನ್ ರೋಡ್ ಕಾಂಗ್ರೆಸ್ ಇದರ ಸದಸ್ಯರಾದ ಮೂಲ್ಕಿ ಜೀವನ್ ಕೆ.ಶೆಟ್ಟಿ ಅವರು ಮಾತಾನಾಡಿ, ಮೂಲ್ಕಿ ಹೆದ್ದಾರಿಯ 5 ಡೆಂಜರ್ ಜೋನ್‌ಗಳ ಬಗ್ಗೆ ವಿವರಿಸಿ, ಪರ್ಯಾಯ ವ್ಯವಸ್ಥೆಯಾಗಿ ಅಂಡರ್ ಪಾಸ್ ಮತ್ತು ಬಪ್ಪನಾಡು ಶಾಂಭವಿ ಸೇತುವೆಯಿಂದ ಕೊಲ್ನಾಡು ಜಂಕ್ಷನ್‌ವರೆಗೆ ಸರ್ವಿಸ್ ರೋಡ್ ಅತ್ಯವಶ್ಯಕತೆಯಿದೆ.
ಈ ಬಗ್ಗೆ ಸೆಕ್ರೆಟರಿ ಜನರಲ್- ಇಂಡಿಯನ್ ರೋಡ್ ಕಾಂಗ್ರೆಸ್ ಹಾಗೂ ಡೈರೆಕ್ಟರ್ ಜನರಲ್, ಮಿನಿಸ್ಟ್ರೀ ಆಫ್ ರೋಡ್ ಟ್ರಾನ್ಸ್ ಪೋರ್ಟ್ ಆಂಡ್ ಹೈವೇಸ್ ಆದ ಎಸ್.ಕೆ.ನಿರ್ಮಲ್ ಇವರಿಗೆ ಮನವಿಯನ್ನು ನೀಡಿದ್ದಾರೆ. ಇದಕ್ಕೆ ಸ್ಪಂದಿಸಿದ ಅವರು ಚೆರ್‌ಮೆನ್- ಎನ್‌ಹೆಚ್‌ಎಐ ಇವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ ಇನ್ನು ಈ ಸಂದರ್ಭದಲ್ಲಿ ಪಂಕಜ್ ಅಗರ್ವಾಲ್, ಚೀಫ್ ಇಂಜಿನಿಯರ್, ಮಿನಿಸ್ಟಿç ಆಫ್ ರೋಡ್ ಟ್ರಾನ್ಸ್ ಸ್ಪೋರ್ಟ್ ಮತ್ತು ಹೈವೇಸ್ ಇವರು ಉಪಸ್ಥಿತರಿದ್ರು.



