ತಂದೆಯಿಂದಲೇ ಮಗನ ಬರ್ಬರ ಹತ್ಯೆಯಾದ ಘಟನೆ ಆನೇಕಲ್ ಪಟ್ಟಣ ಸಮೀಪದ ನಾರಾಯಣಪುರದಲ್ಲಿ ನಡೆದಿದೆ.

ಸುರೇಶ್ (35) ಕೊಲೆಯಾದ ವ್ಯಕ್ತಿ. ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಸುರೇಶ್, ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದನಂತೆ. ಅದೇ ರೀತಿ ನಿನ್ನೆ ಕುಡಿದು ಬಂದು ಗಲಾಟೆ ಮಾಡಿದ್ದ. ತಾಯಿಯನ್ನು ಹಿಡಿದು ಹೊಡೆಯುತ್ತಿದ್ದನಂತೆ.
ಇದನ್ನು ನೋಡಿ ತಂದೆ ಯಲ್ಲಪ್ಪ, ಗಲಾಟೆ ಬಿಡಿಸಲು ಬಂದಿದ್ದಾನೆ. ಆಗ ಯಲ್ಲಪ್ಪನ ಮೇಲೂ ಹಲ್ಲೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಸುರೇಶ್ ಕುತ್ತಿಗೆಗೆ ಚುಚ್ಚಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಪೊಲೀಸರು ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದಾರೆ. ಕೇಸ್ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.



