ಜನ ಮನದ ನಾಡಿ ಮಿಡಿತ

Advertisement

ಅಂದಿನ ಸೇಡು ತೀರಿಸಿಕೊಳ್ಳಲೇಬೇಕು: 3 ಸರಣಿ.. ಮೂವರು ಕ್ಯಾಪ್ಟನ್ಸ್​.. ಡಿಫರೆಂಟ್ ಚಾಲೆಂಜಸ್..!ಏನಿದು ಕಹಾನಿ..?

ದಕ್ಷಿಣ ಆಫ್ರಿಕಾ ಪ್ರವಾಸ.. ಟೀಮ್ ಇಂಡಿಯಾ ಪಾಲಿಗೆ ಪ್ರತಿಷ್ಠಿತ ಸಿರೀಸ್​.. ಈ ಸರಣಿಗೆ 3 ವಿಭಿನ್ನ ತಂಡಗಳಿಂದ 32 ಆಟಗಾರರಿಗೆ ಮಣೆ ಹಾಕಿದೆ. ಶತಯ ಗತಾಯ ಗೆಲ್ಲೋ ಪಣ ತೊಟ್ಟಿದೆ. ಮೂರು ಸರಣಿಗಳ ಮೂವರು ಕ್ಯಾಪ್ಟನ್ಸ್​ಗೂ ಬಿಗ್ ಚಾಲೆಂಜ್ ಆಗಿದೆ.

30ಕ್ಕೂ ಹೆಚ್ಚು ಆಟಗಾರರು ಆಫ್ರಿಕಾ ಸವಾಲ್​ ಗೆಲ್ಲೋದು ಕಷ್ಟ

ಏಕದಿನ ವಿಶ್ವಕಪ್​ ಬಳಿಕ ಆಸ್ಟ್ರೇಲಿಯನ್ ಸಿರೀಸ್ ಗೆದ್ದ ಟೀಮ್ ಇಂಡಿಯಾ, ಈಗ ಸೌತ್ ಆಫ್ರಿಕನ್ ಬೇಟೆಗೆ ಇಳಿಯುತ್ತಿದೆ. ಮೂರು ಸರಣಿಗಳಿಗೆ ಮೂರು ವಿಭಿನ್ನ ತಂಡಗಳನ್ನು ಪ್ರಕಟಿಸಿರುವ ಸೆಲೆಕ್ಷನ್ ಕಮಿಟಿ, 30ಕ್ಕೂ ಅಧಿಕ ಆಟಗಾರರಿಗೆ ಮಣೆಹಾಕಿದೆ. ಯುವ ಆಟಗಾರರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಹರಿಣಗಳ ಬೇಟೆಗೆ ಸನ್ನದ್ಧಗೊಳಿಸಿದೆ. ಇದೇ ಸವಾರಿ ಟೀಮ್ ಇಂಡಿಯಾಗೆ ಕಬ್ಬಿಣದ ಕಡಲೆಯಾಗಿದೆ. ಇದಕ್ಕೆಲ್ಲಾ ಕಾರಣ ಸೌತ್ ಆಫ್ರಿಕನ್ಸ್​ ಚಾಲೆಂಜ್​.

ಅನಾನುಭವಿ ಟಿ20 ತಂಡಕ್ಕೆ ಕಂಡೀಷನ್ಸ್​ ಚಾಲೆಂಜ್..!

ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯನ್ನು 4-1ರ ಅಂತರದಿಂದ ಗೆದ್ದ ಸೂರ್ಯ ನಾಯಕತ್ವದ ಟೀಮ್ ಇಂಡಿಯಾಗೆ, ಸೌತ್ ಆಫ್ರಿಕಾ ಸಿರೀಸ್​ ನಿಜಕ್ಕೂ ಅಗ್ನಿ ಪರೀಕ್ಷೆಯಾಗಿದೆ. ಇಂಡಿಯನ್ ಕಂಡೀಷನ್ಸ್​ನ ಅಡ್ವಾಂಟೇಜ್​ ಹೊಂದಿದ್ದ ಯುವ ಪಡೆ, ಈಗ ಸೌತ್ ಆಫ್ರಿಕಾದ ಕಂಡೀಷನ್ಸ್​ ಮಾರಕವಾಗಲಿದೆ. ಇದಕ್ಕೆ ಕಾರಣ ಟಿ20 ತಂಡದಲ್ಲಿನ ಯುವ ಪಡೆ.

ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಬಹುತೇಕ ಆಟಗಾರರಿಗೆ, ಸೌತ್​ ಆಫ್ರಿಕನ್​​​ ಕಂಡೀಷನ್ಸ್​ನಲ್ಲಿ ಆಡಿದ ಅನುಭವವೇ ಇಲ್ಲ. ರವೀಂದ್ರ ಜಡೇಜಾ, ಕುಲ್ ದೀಪ್ ಯಾದವ್, ಶ್ರೇಯಸ್​ ಅಯ್ಯರ್, ಮೊಹಮ್ಮದ್ ಸಿರಾಜ್ ಹೊರತು ಪಡೆಸಿದ್ರೆ ಉಳಿದ್ಯಾರು ಈ ಕಂಡೀಷನ್ಸ್​ನಲ್ಲಿ ಆಡಿಲ್ಲ. ಹೀಗಾಗಿ ಸೌತ್ ಆಫ್ರಿಕಾದ ಸ್ವಿಂಗ್ ಆ್ಯಂಡ್ ಬೌನ್ಸಿ ಕಂಡೀಷನ್ಸ್​ ಬಿಗ್ ಚಾಲೆಂಜ್​​​​​​​​​​ ಆಗಿರಲಿದೆ.

ಏಕದಿನ ನಾಯಕ ಕೆ.ಎಲ್.ರಾಹುಲ್​​ಗೆ ಡಬಲ್ ಟಾಸ್ಕ್..!

ಟಿ-20ಯಲ್ಲೇ ಅಲ್ಲ. ಏಕದಿನ ತಂಡಕ್ಕೂ ಸೌತ್​ ಆಫ್ರಿಕನ್ ಸರಣಿ ಗೆಲುವು ಸುಲಭವಾಗಿಲ್ಲ. ಕೇವಲ ಬೆರಳೆಣಿಕೆಯಷ್ಟೇ ಅನುಭವಿ ಆಟಗಾರರನ್ನ ಹೊಂದಿರುವ ಕೆ.ಎಲ್​.ರಾಹುಲ್​ಗೆ, ವೈಯಕ್ತಿಕವಾಗಿಯೂ ಈ ಸರಣಿ ಗೆಲ್ಲೋದು ಪ್ರತಿಷ್ಠೆಯಾಗಿದೆ. 2022ರ ಸೌತ್ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್​ ಸರಣಿ ಗೆಲ್ಲೋ ಸುವರ್ಣಾವಕಾಶ ಕೈಚೆಲ್ಲಿದ್ದ ಕೆ.ಎಲ್.ರಾಹುಲ್, 3 ಪಂದ್ಯಗಳ ಏಕದಿನ ಸರಣಿಯಲ್ಲೂ ವೈಟ್​​ವಾಶ್ ಮುಖಭಂಗ ಅನುಭವಿಸಿದ್ದರು. ಆದ್ರೀಗ ಸಂಪೂರ್ಣ ಯುವ ಪಡೆಯೊಂದಿಗೆ ಹರಿಣ ಬೇಟೆಗೆ ಇಳಿಯುತ್ತಿರುವ ಕನ್ನಡಿಗನಿಗೆ ನಾಯಕತ್ವದ ಸವಾಲಿನ ಜೊತೆಗೆ ತಂಡವನ್ನ ಗೆಲುವಿನ ದಡ ಸೇರಿಸಬೇಕಾದ ಸವಾಲು ಇದ್ದೇ ಇದೆ.

ಟೆಸ್ಟ್​ನಲ್ಲಿ ರೋಹಿತ್ ಈಡೇರಿಸುತ್ತಾರಾ ವರ್ಷಗಳ ಕನಸು?

1992ರಿಂದ ಸೌತ್​ ಆಫ್ರಿಕಾ ಎದುರು ಟೆಸ್ಟ್​ ಸರಣಿಯನ್ನಾಡುತ್ತಿರುವ ಟೀಮ್ ಇಂಡಿಯಾ, ಇದುವರೆಗೆ ಹರಿಣಗಳ ನಾಡಲ್ಲಿ ಟೆಸ್ಟ್​ ಗೆದ್ದ ಸಾಧನೆಯನ್ನೇ ಮಾಡಿಲ್ಲ. 2022ರ ಪ್ರವಾಸದಲ್ಲಿ ಇಂಥದ್ದೊಂದು ಅವಕಾಶ ಇದ್ದರೂ, ಕೂದಲೆಳೆ ಅಂತರದಲ್ಲೇ ಮಿಸ್ ಆಗಿತ್ತು. 2011ರಲ್ಲಿ ಧೋನಿ ನಾಯಕತ್ವದಲ್ಲಿ ಟೆಸ್ಟ್​ ಸರಣಿ ಡ್ರಾ ಮಾಡಿಕೊಂಡಿರೋದೇ ಬಿಗ್ಗೆಸ್ಟ್ ಸಕ್ಸಸ್​. ಆದ್ರೀಗ ಇತಿಹಾಸ ಬದಲಿಸುವ ಚಾಲೆಂಜ್ ರೋಹಿತ್ ಮುಂದಿದೆ.

ಬ್ಯಾಟಿಂಗ್ ಆ್ಯಂಡ್ ಬೌಲಿಂಗ್​ನಲ್ಲಿ ಅನುಭವಿಗಳನ್ನೇ ಹೊಂದಿರುವ ರೋಹಿತ್​​​​​​​ಗೆ ಟೆಸ್ಟ್​ ಸಿರೀಸ್​ ಗೆಲ್ಲೋ ಅವಕಾಶ ಇದೆ. ಆ ಮೂಲಕ ಹರಿಣಗಳ ನಾಡಲ್ಲಿ ಟೆಸ್ಟ್​ ಸಿರೀಸ್​​ ಗೆದ್ದ ಫಸ್ಟ್​ ಇಂಡಿಯನ್ ಕ್ಯಾಪ್ಟನ್ ಎಂಬ ಹೆಗ್ಗಳಿಕೆ ಮಾಡಬಹುದಾಗಿದೆ. ಇದು ಸೌತ್ ಆಫ್ರಿಕಾದ ಬೆಂಕಿ ಚೆಂಡುಗಳ ಸವಾಲನ್ನ ಇಂಡಿಯನ್ ಬ್ಯಾಟರ್​​ಗಳು ಮೆಟ್ಟಿ ನಿಲ್ಲುವ ಮೇಲಿದೆ. ಒಟ್ನಲ್ಲಿ.. ಮೂರು ಡಿಫರೆಂಟ್​ ಟೀಮ್ಸ್​ನೊಂದಿಗೆ ಹರಿಣ ಬೇಟೆಗೆ ಹೊರಟಿರುವ ಟೀಮ್ ಇಂಡಿಯಾ, ಸರಣಿ ಗೆಲ್ಲೋ ಎಲ್ಲಾ ಸಾಧ್ಯತೆಗಳು ಇವೆ. ಇದಕ್ಕಾಗಿ ಆಫ್ರಿಕನ್ ಸವಾಲು ಮೆಟ್ಟಿ ನಿಲ್ಲಬೇಕಾದ ಚಾಲೆಂಜ್ ಟೀಮ್ ಇಂಡಿಯಾ ಮುಂದಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!