ದಕ್ಷಿಣ ಆಫ್ರಿಕಾ ಪ್ರವಾಸ.. ಟೀಮ್ ಇಂಡಿಯಾ ಪಾಲಿಗೆ ಪ್ರತಿಷ್ಠಿತ ಸಿರೀಸ್.. ಈ ಸರಣಿಗೆ 3 ವಿಭಿನ್ನ ತಂಡಗಳಿಂದ 32 ಆಟಗಾರರಿಗೆ ಮಣೆ ಹಾಕಿದೆ. ಶತಯ ಗತಾಯ ಗೆಲ್ಲೋ ಪಣ ತೊಟ್ಟಿದೆ. ಮೂರು ಸರಣಿಗಳ ಮೂವರು ಕ್ಯಾಪ್ಟನ್ಸ್ಗೂ ಬಿಗ್ ಚಾಲೆಂಜ್ ಆಗಿದೆ.
30ಕ್ಕೂ ಹೆಚ್ಚು ಆಟಗಾರರು ಆಫ್ರಿಕಾ ಸವಾಲ್ ಗೆಲ್ಲೋದು ಕಷ್ಟ
ಏಕದಿನ ವಿಶ್ವಕಪ್ ಬಳಿಕ ಆಸ್ಟ್ರೇಲಿಯನ್ ಸಿರೀಸ್ ಗೆದ್ದ ಟೀಮ್ ಇಂಡಿಯಾ, ಈಗ ಸೌತ್ ಆಫ್ರಿಕನ್ ಬೇಟೆಗೆ ಇಳಿಯುತ್ತಿದೆ. ಮೂರು ಸರಣಿಗಳಿಗೆ ಮೂರು ವಿಭಿನ್ನ ತಂಡಗಳನ್ನು ಪ್ರಕಟಿಸಿರುವ ಸೆಲೆಕ್ಷನ್ ಕಮಿಟಿ, 30ಕ್ಕೂ ಅಧಿಕ ಆಟಗಾರರಿಗೆ ಮಣೆಹಾಕಿದೆ. ಯುವ ಆಟಗಾರರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಹರಿಣಗಳ ಬೇಟೆಗೆ ಸನ್ನದ್ಧಗೊಳಿಸಿದೆ. ಇದೇ ಸವಾರಿ ಟೀಮ್ ಇಂಡಿಯಾಗೆ ಕಬ್ಬಿಣದ ಕಡಲೆಯಾಗಿದೆ. ಇದಕ್ಕೆಲ್ಲಾ ಕಾರಣ ಸೌತ್ ಆಫ್ರಿಕನ್ಸ್ ಚಾಲೆಂಜ್.
ಅನಾನುಭವಿ ಟಿ20 ತಂಡಕ್ಕೆ ಕಂಡೀಷನ್ಸ್ ಚಾಲೆಂಜ್..!
ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯನ್ನು 4-1ರ ಅಂತರದಿಂದ ಗೆದ್ದ ಸೂರ್ಯ ನಾಯಕತ್ವದ ಟೀಮ್ ಇಂಡಿಯಾಗೆ, ಸೌತ್ ಆಫ್ರಿಕಾ ಸಿರೀಸ್ ನಿಜಕ್ಕೂ ಅಗ್ನಿ ಪರೀಕ್ಷೆಯಾಗಿದೆ. ಇಂಡಿಯನ್ ಕಂಡೀಷನ್ಸ್ನ ಅಡ್ವಾಂಟೇಜ್ ಹೊಂದಿದ್ದ ಯುವ ಪಡೆ, ಈಗ ಸೌತ್ ಆಫ್ರಿಕಾದ ಕಂಡೀಷನ್ಸ್ ಮಾರಕವಾಗಲಿದೆ. ಇದಕ್ಕೆ ಕಾರಣ ಟಿ20 ತಂಡದಲ್ಲಿನ ಯುವ ಪಡೆ.
ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಬಹುತೇಕ ಆಟಗಾರರಿಗೆ, ಸೌತ್ ಆಫ್ರಿಕನ್ ಕಂಡೀಷನ್ಸ್ನಲ್ಲಿ ಆಡಿದ ಅನುಭವವೇ ಇಲ್ಲ. ರವೀಂದ್ರ ಜಡೇಜಾ, ಕುಲ್ ದೀಪ್ ಯಾದವ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್ ಹೊರತು ಪಡೆಸಿದ್ರೆ ಉಳಿದ್ಯಾರು ಈ ಕಂಡೀಷನ್ಸ್ನಲ್ಲಿ ಆಡಿಲ್ಲ. ಹೀಗಾಗಿ ಸೌತ್ ಆಫ್ರಿಕಾದ ಸ್ವಿಂಗ್ ಆ್ಯಂಡ್ ಬೌನ್ಸಿ ಕಂಡೀಷನ್ಸ್ ಬಿಗ್ ಚಾಲೆಂಜ್ ಆಗಿರಲಿದೆ.
ಏಕದಿನ ನಾಯಕ ಕೆ.ಎಲ್.ರಾಹುಲ್ಗೆ ಡಬಲ್ ಟಾಸ್ಕ್..!
ಟಿ-20ಯಲ್ಲೇ ಅಲ್ಲ. ಏಕದಿನ ತಂಡಕ್ಕೂ ಸೌತ್ ಆಫ್ರಿಕನ್ ಸರಣಿ ಗೆಲುವು ಸುಲಭವಾಗಿಲ್ಲ. ಕೇವಲ ಬೆರಳೆಣಿಕೆಯಷ್ಟೇ ಅನುಭವಿ ಆಟಗಾರರನ್ನ ಹೊಂದಿರುವ ಕೆ.ಎಲ್.ರಾಹುಲ್ಗೆ, ವೈಯಕ್ತಿಕವಾಗಿಯೂ ಈ ಸರಣಿ ಗೆಲ್ಲೋದು ಪ್ರತಿಷ್ಠೆಯಾಗಿದೆ. 2022ರ ಸೌತ್ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಗೆಲ್ಲೋ ಸುವರ್ಣಾವಕಾಶ ಕೈಚೆಲ್ಲಿದ್ದ ಕೆ.ಎಲ್.ರಾಹುಲ್, 3 ಪಂದ್ಯಗಳ ಏಕದಿನ ಸರಣಿಯಲ್ಲೂ ವೈಟ್ವಾಶ್ ಮುಖಭಂಗ ಅನುಭವಿಸಿದ್ದರು. ಆದ್ರೀಗ ಸಂಪೂರ್ಣ ಯುವ ಪಡೆಯೊಂದಿಗೆ ಹರಿಣ ಬೇಟೆಗೆ ಇಳಿಯುತ್ತಿರುವ ಕನ್ನಡಿಗನಿಗೆ ನಾಯಕತ್ವದ ಸವಾಲಿನ ಜೊತೆಗೆ ತಂಡವನ್ನ ಗೆಲುವಿನ ದಡ ಸೇರಿಸಬೇಕಾದ ಸವಾಲು ಇದ್ದೇ ಇದೆ.
ಟೆಸ್ಟ್ನಲ್ಲಿ ರೋಹಿತ್ ಈಡೇರಿಸುತ್ತಾರಾ ವರ್ಷಗಳ ಕನಸು?
1992ರಿಂದ ಸೌತ್ ಆಫ್ರಿಕಾ ಎದುರು ಟೆಸ್ಟ್ ಸರಣಿಯನ್ನಾಡುತ್ತಿರುವ ಟೀಮ್ ಇಂಡಿಯಾ, ಇದುವರೆಗೆ ಹರಿಣಗಳ ನಾಡಲ್ಲಿ ಟೆಸ್ಟ್ ಗೆದ್ದ ಸಾಧನೆಯನ್ನೇ ಮಾಡಿಲ್ಲ. 2022ರ ಪ್ರವಾಸದಲ್ಲಿ ಇಂಥದ್ದೊಂದು ಅವಕಾಶ ಇದ್ದರೂ, ಕೂದಲೆಳೆ ಅಂತರದಲ್ಲೇ ಮಿಸ್ ಆಗಿತ್ತು. 2011ರಲ್ಲಿ ಧೋನಿ ನಾಯಕತ್ವದಲ್ಲಿ ಟೆಸ್ಟ್ ಸರಣಿ ಡ್ರಾ ಮಾಡಿಕೊಂಡಿರೋದೇ ಬಿಗ್ಗೆಸ್ಟ್ ಸಕ್ಸಸ್. ಆದ್ರೀಗ ಇತಿಹಾಸ ಬದಲಿಸುವ ಚಾಲೆಂಜ್ ರೋಹಿತ್ ಮುಂದಿದೆ.
ಬ್ಯಾಟಿಂಗ್ ಆ್ಯಂಡ್ ಬೌಲಿಂಗ್ನಲ್ಲಿ ಅನುಭವಿಗಳನ್ನೇ ಹೊಂದಿರುವ ರೋಹಿತ್ಗೆ ಟೆಸ್ಟ್ ಸಿರೀಸ್ ಗೆಲ್ಲೋ ಅವಕಾಶ ಇದೆ. ಆ ಮೂಲಕ ಹರಿಣಗಳ ನಾಡಲ್ಲಿ ಟೆಸ್ಟ್ ಸಿರೀಸ್ ಗೆದ್ದ ಫಸ್ಟ್ ಇಂಡಿಯನ್ ಕ್ಯಾಪ್ಟನ್ ಎಂಬ ಹೆಗ್ಗಳಿಕೆ ಮಾಡಬಹುದಾಗಿದೆ. ಇದು ಸೌತ್ ಆಫ್ರಿಕಾದ ಬೆಂಕಿ ಚೆಂಡುಗಳ ಸವಾಲನ್ನ ಇಂಡಿಯನ್ ಬ್ಯಾಟರ್ಗಳು ಮೆಟ್ಟಿ ನಿಲ್ಲುವ ಮೇಲಿದೆ. ಒಟ್ನಲ್ಲಿ.. ಮೂರು ಡಿಫರೆಂಟ್ ಟೀಮ್ಸ್ನೊಂದಿಗೆ ಹರಿಣ ಬೇಟೆಗೆ ಹೊರಟಿರುವ ಟೀಮ್ ಇಂಡಿಯಾ, ಸರಣಿ ಗೆಲ್ಲೋ ಎಲ್ಲಾ ಸಾಧ್ಯತೆಗಳು ಇವೆ. ಇದಕ್ಕಾಗಿ ಆಫ್ರಿಕನ್ ಸವಾಲು ಮೆಟ್ಟಿ ನಿಲ್ಲಬೇಕಾದ ಚಾಲೆಂಜ್ ಟೀಮ್ ಇಂಡಿಯಾ ಮುಂದಿದೆ.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…