ಜನ ಮನದ ನಾಡಿ ಮಿಡಿತ

Advertisement

ಯುಕೊ ಬ್ಯಾಂಕ್‌ನ ಖಾತೆಗಳಲ್ಲಿ ಅಕ್ರಮ ವ್ಯವಹಾರ ; ಮಂಗಳೂರಿನಲ್ಲೂ ಸಿಬಿಐ ತನಿಖೆ

ಮಂಗಳೂರು: ಯುಕೊ ಬ್ಯಾಂಕ್‌ನ ಖಾತೆಗಳಲ್ಲಿ 820 ಕೋಟಿ ರೂಪಾಯಿ ಮೌಲ್ಯದ ಐಎಂಪಿಎಸ್‌ ವ್ಯವಹಾರ ಅಕ್ರಮವಾಗಿ ನಡೆದಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳೂರು ಸೇರಿದಂತೆ 13 ಸ್ಥಳಗಳಲ್ಲಿ ಶೋಧ ನಡೆಸಿದೆ.

ಕೋಲ್ಕತಾ ಮತ್ತು ಮಂಗಳೂರು ಸೇರಿದಂತೆ ಸುಮಾರು 13 ಸ್ಥಳಗಳಲ್ಲಿ ಆರೋಪಿಗಳು ಮತ್ತು ಖಾಸಗಿ ವ್ಯಕ್ತಿ ಗಳು/ಬ್ಯಾಂಕ್‌ ಅಧಿಕಾರಿಗಳು ಸೇರಿ ದಂತೆ ಸಂಸ್ಥೆ ವಿಚಾರಣೆ, ಶೋಧ ನಡೆಸಿದೆ ಎಂದು ಸಿಬಿಐ ಪ್ರಕಟನೆ ತಿಳಿಸಿದೆ.

ಹುಡುಕಾಟದ ಸಮಯದಲ್ಲಿ, ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ಗ್ಳು, ಕಂಪ್ಯೂಟರ್‌ ಸಿಸ್ಟಮ್‌ಗಳು, ಇಮೇಲ್‌ ಆಕ್ರೈವ್‌ಗಳು ಮತ್ತು ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್‌ ಪುರಾವೆಗಳನ್ನು ಪಡೆಯಲಾಗಿದೆ.
ಯುಕೋ ಬ್ಯಾಂಕ್‌ನಿಂದ ಬಂದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿದೆ.

ಈ ಬ್ಯಾಂಕ್‌ನ ಇಬ್ಬರು ಸಹಾಯಕ ಎಂಜಿನಿಯರ್‌ಗಳು ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಅನುಮಾನಾಸ್ಪದ ತತ್‌ಕ್ಷಣದ ಪಾವತಿ ಸೇವೆ (ಐಎಂಪಿಎಸ್‌) ವಹಿವಾಟಿನ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ನ. 10 ಹಾಗೂ 13ರ ಮಧ್ಯೆ 820 ಕೋಟಿ ರೂ. ಮೊತ್ತವನ್ನು ಏಳು ಖಾಸಗಿ ಬ್ಯಾಂಕ್‌ಗಳ 14,000 ಖಾತೆದಾರರಿಂದ ಐಎಂಪಿಎಸ್‌ ಆಂತರಿಕ ವಹಿವಾಟುಗಳ ಮೂಲಕ ಯುಕೋ ಬ್ಯಾಂಕ್‌ನ 41,000 ಖಾತೆದಾರರಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.

ಅಚಾನಕ್‌ ಆಗಿ ಖಾತೆಗೆ ಹಣ ಬಿದ್ದ ಕೂಡಲೇ ಕೆಲವರು ವಿತ್‌ಡ್ರಾ ಕೂಡ ಮಾಡಿಕೊಂಡಿದ್ದಾರೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಸಿಬಿಐ ತಿಳಿಸಿದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!