ಉದಯೋನ್ಮುಖ ಕರಾಟೆ ಪಟುವಾಗಿ ಹಾಗೂ ಪ್ರಾಮಾಣಿಕ ಪ್ರಯತ್ನ, ಶ್ರದ್ಧೆ, ಸಾಧಿಸುವ ಛಲ, ಗೆಲುವಿನ ಗುರಿಯೊಂದಿಗೆ ಮುನ್ನುಗ್ಗಿದಾಗ ಸಾಧನೆಯ ಕಿರೀಟಕ್ಕೆ ಹೊಸ ಗರಿಗಳು ಮೂಡುತ್ತಾ ಸಾಗುತ್ತವೆ. ಇದಕ್ಕೆ ಸಾಕ್ಷಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅನೇಕ ಬಾರಿ ಚಿನ್ನದ ಪ್ರಶಸ್ತಿ, ಹಾಗೂ ಡಿ. 03 ರಂದು ಹಿರಿಯಡ್ಕದ ಶ್ರೀ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ನಡೆದ 6ನೇ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಬೆಳ್ಳಿಯ ಪದಕ ಪಡೆದ ಕೀಳಂಜೆಯ ರಿಯಾ. ಜಿ. ಶೆಟ್ಟಿ.

ಉಡುಪಿ ಒಳಕಾಡು ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ, ಹಾವಂಜೆ ಗ್ರಾಮದ ಕೀಳಂಜೆಯ ಗಣೇಶ್ ಶೆಟ್ಟಿ ಮತ್ತು ಜಯಲಕ್ಷ್ಮೀ ಗಣೇಶ್ ಶೆಟ್ಟಿಯವರ ಸುಪುತ್ರಿ. ಅಂತರಾಷ್ಟ್ರೀಯ, ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ಈ ಬಾಲ ಪ್ರತಿಭೆ; ಅಂತರಾಷ್ಟ್ರೀಯ ಕರಾಟೆ ಪಟು ಶಿಕ್ಷಕಿ ಪ್ರವೀಣ ಪರ್ಕಳ ಅವರ ಶಿಷ್ಯೆ.



