ಮಂಗಳೂರು:ಕ್ರೆಡೈ ಮಂಗಳೂರು ವತಿಯಿಂದ 2024ರ ಮಾರ್ಚ್ 9 ಮತ್ತು 10ರಂದು ಎರಡು ದಿನಗಳ ಕಾಲ ಬೃಹತ್ ಮಟ್ಟದ ‘ರಿಯಾಲ್ಟಿ ಎಕ್ಸ್ಪೋ’ ಆಯೋಜಿಸಲಾಗಿದೆ ಎಂದು ಕ್ರೆಡೈ ಸಂಸ್ಥೆಯ ಅಧ್ಯಕ್ಷ ವಿನೋದ್ ಪಿಂಟೋ ಹೇಳಿದ್ದಾರೆ.


ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಅವರು, 50ಕ್ಕೂ ಹೆಚ್ಚು ಉದ್ಯಮಿಗಳು, ವಿವಿಧ ಉದ್ಯಮ ಸಂಸ್ಥೆಗಳು ಸೇರಿಕೊಂಡು ಈ ಎಕ್ಸ್ ಪೋ ವನ್ನ ಆಯೋಜನೆ ಮಾಡಲು ನಿರ್ಧರಿಸಿದೆ. ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳು ದೊರೆಯುವಂತೆ ಎಕ್ಸ್ಪೋ ದಲ್ಲಿ ವ್ಯವಸ್ಥೆ ಮಾಡಲಾಗುವುದು. ಲಕ್ಸುರಿ ಅಪಾರ್ಟ್ಮೆಂಟ್‌ಗಳು, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ವಸತಿ, ಬ್ಯಾಂಕ್, ಕಾರ್ ಡೀಲರ್ಸ್ ಸೇರಿದಂತೆ ವಿವಿಧ ಸಂಸ್ಥೆಗಳು ಎಕ್ಸ್ ಪೋದಲ್ಲಿ ಭಾಗವಹಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಈ ಸುದ್ದಿಗೋಷ್ಠಿಯಲ್ಲಿ ಕ್ರೆಡೈ ಕಾರ್ಯದರ್ಶಿ ಗುರು ಎಂ ರಾವ್, ಉಪಾಧ್ಯಕ್ಷ ಪ್ರಶಾಂತ್ ಸನಿಲ್, ಜತೆ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಭಂಡಾರಿ, ಕೋಶಾಧಿಕಾರಿ ಕರುಣಾಕರನ್ , ಪ್ರಮುಖರಾದ ರೋಹನ್ ಮೊಂತೇರೊ, ನವೀನ್ ಕಾರ್ಡೋಜ, ಧೀರಜ್ ಅಮೀನ್, ಅವಲೋನ್ ಪಾತ್ರೊ, ವಿಲಿಯಂ ಡಿಸೋಜ, ರವೀಂದ್ರ ರಾವ್ ಹಾಗು ಮತ್ತಿತರರು ಉಪಸ್ಥಿತರಿದ್ದರು.



