ಉಡುಪಿ:ಉಡುಪಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕ ಸಹಿತ ರಾಜ್ಯಾದ್ಯಂತ ಇರುವ ಡಯಾಲಿಸಿಸ್ ಘಟಕಗಳ ಅವ್ಯವಸ್ಥೆ ಬಗ್ಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ.

ಡಯಾಲಿಸಿಸ್ ಘಟಕಗಳ ಅವ್ಯವಸ್ಥೆಯಿಂದ ಬಡರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಯ ಮಂಡಿಸಿದ್ರು. ಅಜ್ಜರಕಾಡಿನ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕಗಳ ಅವ್ಯವಸ್ಥೆಯಿಂದ ಪರದಾಡುತ್ತಿದ್ದ ಬಡರೋಗಿಗಳಿಗೆ ಸ್ವತಃ ಮುತುರ್ವಜಿ ವಹಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುವ ಶಾಸಕ ಯಶ್ಪಾಲ್ ಸುವರ್ಣ ಅವರ ಜನಪರ ಕಾಳಜಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.



