ಉಡುಪಿ: ರೂಪಕಲಾ ನಾಟಕ ತಂಡದ ಮೂರು ಮುತ್ತು ನಾಟಕ ಖ್ಯಾತಿಯ ಕಲಾವಿದ ಅಶೋಕ್ ಶಾನುಭಾಗ್ ಅವರು ಶುಕ್ರವಾರ ರಾತ್ರಿ ನಿಧನ ಹೊಂದಿದರು.

ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಿಸದೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ಇವರು ಮೂರು ಮುತ್ತು, ಅವನಲ್ಲ ಇವನು, ಪಾಪ ಪಾಂಡು, ಅಳುವುದೋ ನಗುವುದೋ, ರಾಮ ಕೃಷ್ಣ ಗೋವಿಂದ ಇನ್ನು ಹಲವು ನಾಟಕಗಳಲ್ಲಿ ಹಾಸ್ಯ ಪಾತ್ರದಿಂದ ಭಾರೀ ಜನಮನ್ನಣೆಗಳಿಸಿದ್ದರು.



