ಬOಟ್ವಾಳ:ಪುದು ಗ್ರಾಮದ ಜನರ ಹಲವು ವರ್ಷಗಳ ಬೇಡಿಕೆಯಾಗಿರುವ ಮನೆ ಮನೆಗೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕನಸು ಮಂಗಳೂರು ವಿಧಾನಸಾಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಅವರ ಪರಿಶ್ರಮದಿಂದ ಇಂದು ನನಸಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಉಮರ್ ಫಾರೂಕ್ ಫರಂಗಿಪೇಟೆ ಹೇಳಿದ್ದಾರೆ.

ಇವರು ಜಲ ಜೀವನ್ ಮಿಶನ್ ಯೋಜನೆಯಡಿ 6 ಕೋಟಿ 77 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮನೆ ಮನೆಗೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡ್ತ, ಈ ಯೋಜನೆಯಡಿ ಪುದು ಗ್ರಾಮದ ಅಮ್ಮೆಮ್ಮಾರ್, ಪುಂಚಮೆ, ಫರಂಗಿಪೇಟೆ, ಪೇರಿಮಾರ್, ಕುಂಪನಮಜಲು, ನೆತ್ತರಕೆರೆ ಮತ್ತು ಸುಜೀರ್‌ನಲ್ಲಿ ಬೃಹತ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗುವುದು.

1 ಲಕ್ಷ ಲೀಟರ್ ಸಾಮರ್ಥ್ಯದ 1 ಟ್ಯಾಂಕ್, 50 ಸಾವಿರ ಲೀಟರ್ ಸಾಮರ್ಥ್ಯದ 5 ಟ್ಯಾಂಕ್, 50 ಸಾವಿರ ಲೀಟರ್ ಸಾಮರ್ಥ್ಯದ 1 ಜಿ.ಎಲ್.ಎಸ್.ಆರ್ ಟ್ಯಾಂಕ್ ನಿರ್ಮಾಣವಾಗಲಿದೆ. ಈ ಟ್ಯಾಂಕ್‌ಗಳಿAದ ಪುದು ಗ್ರಾಮದ ಪ್ರತಿಯೊಂದು ಮನೆಗೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಸರಬರಾಜು ಆಗಲಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.



