ಮOಗಳೂರು:ಮOಗಳೂರಿನಲ್ಲಿ ಕುಲ್ಕಿ ಹಬ್ ಎಂಬ ಜೂಸ್ ಹಾಗೂ ಸ್ನಾಕ್ಸ್ ಮಳಿಗೆ ನಡೆಸುತ್ತಿರುವ 24 ರ ಹರೆಯದ ಮೊಹಮ್ಮದ್ ಆಶಿಕ್ ದೇಶದ ಪ್ರತಿಷ್ಠಿತ ಅಡುಗೆ ಸ್ಪರ್ಧೆ ಮಾಸ್ಟರ್ ಶೆಫ್ ನ ಎಂಟನೇ ಸೀಸನ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತಾನಾಡಿದ, ಸೈಫ್ ಸುಲ್ತಾನ್ ಅವರು, ಇದು ಮಂಗಳೂರು ಮಾತ್ರವಲ್ಲದೇ ಇಡೀ ರಾಜ್ಯಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಅಂತರ್ ರಾಷ್ಟ್ರೀಯ ಖ್ಯಾತಿಯ ಸೂಪರ್ ಸ್ಟಾರ್ ಶೆಫ್‌ಗಳು ತಿರ್ಪುಗಾರರಾಗಿರುವ ಸೋನಿ ಲಿವ್‌ನಲ್ಲಿ ಪ್ರಸಾರವಾದ ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತೀಯ ಮೊಹಮ್ಮದ್ ಆಶಿಕ್ ಅವರು ಚಾಂಪಿಯನ್ ಆಗಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.
ಈ ಪ್ರತಿಷ್ಟಿತ ಸ್ಪರ್ಧೆಯಲ್ಲಿ ವಿಜೇತರಾಗಿ ತವರಿಗೆ ಆಗಮಿಸುತ್ತಿರುವ ಮೊಹಮ್ಮದ್ ಆಶಿಕ್ ಅವರಿಗೆ ಮಂಗಳೂರಿಗರ ಪರವಾಗಿ ಭವ್ಯ ಸ್ವಾಗತ ನೀಡಲು ಮೊಹಮ್ಮದ್ ಆಶಿಕ್ ಫ್ಯಾನ್ಸ್ ಕುಡ್ಲ ಗೆಳೆಯರ ಬಳಗ ಸಜ್ಜಾಗಿದೆ. ಡಿ. 10ರ ಆದಿತ್ಯವಾರದಂದು ಮಧ್ಯಾಹ್ನ 2 ಗಂಟೆಗೆ ಮುಂಬೈಯಿOದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿರುವ ಮೊಹಮ್ಮದ್ ಆಶಿಕ್ ಅವರಿಗೆ ಮಂಗಳೂರು ಹಾಗು ತುಳುನಾಡಿನ ಸಾಂಪ್ರದಾಯಿಕ ಮತ್ತು ವೈಭವದ ಚೆಂಡೆ ವಾದ್ಯಗಳ ಸಹಿತ ಭರ್ಜರಿ ಸ್ವಾಗತ ನೀಡಲು ತಯಾರಿ ನಡೆದಿದೆ.
ಅವರನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಬಂದು ಮಂಗಳೂರು ನಗರದಲ್ಲಿ ಮೆರವಣಿಗೆ ಮಾಡಿ ಬಳಿಕ ನೆಕ್ಸಸ್ ಫಿಝ ಮಾಲ್ ನಲ್ಲಿ ಸನ್ಮಾನಿಸಲಾಗುವುದು ಅಂತ ಮಾಹಿತಿಯನ್ನು ನೀಡಿದ್ದಾರೆ. ಇನ್ನೂ ಈ ಸುದ್ದಿಗೋಷ್ಠಿಯಲ್ಲಿ ಝಾಬೀರ್ ಅಹಮ್ಮದ್, ಮೊಹಮ್ಮದ್ ಅಲಿ ಬಂಟ್ವಾಳ, ಅಬ್ದುಲ್ ರೆಹಮಾನ್ ಆಯನ್ಸ್ ಉಪಸ್ಥಿತರಿದ್ದರು.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…