ಮುಲ್ಕಿ: ಡಿಸೆಂಬರ್ 24ರಂದು ನಡೆಯಲಿರುವ ಇತಿಹಾಸ ಪ್ರಸಿದ್ದ ಮುಲ್ಕಿ ಸೀಮೆ ಅರಸು ಕಂಬಳದ ಆಮಂತ್ರಣ ಪತ್ರಿಕೆಯನ್ನು ಪಡುಪಣಂಬೂರು ಅರಮನೆ ಧರ್ಮ ಚಾವಡಿಯಲ್ಲಿ ಮುಲ್ಕಿ ಸೀಮೆ ಅರಸರಾದ ಎಂ ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ,ಸಮಿತಿ ಅಧ್ಯಕ್ಷರಾದ ಕಿರಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿಯವರು ಬಿಡುಗಡೆಗೊಳಿಸಿದರು.

ಈ ಸಂದರ್ಭ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ ಡಿಸೆಂಬರ್ 24ರಂದು ಮುಲ್ಕಿ ಸೀಮೆಯ ಅರಸು ಕಂಬಳ ನಡೆಯಲಿದ್ದು ಅದೇ ದಿನ ಬೆಳಿಗ್ಗೆ ಪ್ರತಿಷ್ಠಿತ ಮುಲ್ಕಿ ಅರಮನೆಗೆ ಮೈಸೂರು ಸಂಸ್ಥಾನದ ಮಹಾರಾಜರಾದ ಯದುವೀರ್ ಕೃಷ್ಣರಾಜ ಒಡೆಯರ್ ಆಗಮಿಸಲಿದ್ದು ಕಂಬಳದಲ್ಲಿ ಭಾಗಿಯಾಗಲಿದ್ದಾರೆ. ಲಕ್ಷಾಂತರ ಮಂದಿ ಕಂಬಳಕ್ಕೆ ಆಗಮಿಸುವ ನಿರೀಕ್ಷೆ ಇದ್ದು ಕಾರ್ಯಕ್ರಮವನ್ನು ಮುಲ್ಕಿ ಸೀಮೆಯ ನಾಗರಿಕರು ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭ ರಾಮ ಭಟ್, ಬಂಕಿ ನಾಯಕರು, ಸೂರ್ಯ ಕುಮಾರ್ ಹಳೆಯಂಗಡಿ, ಪಡುಪಣಂಬೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುಧೀರ್, ಗೌತಮ್ ಜೈನ್ ಮುಲ್ಕಿ ಅರಮನೆ,ಕಂಬಳ ಸಮಿತಿಯ ಪದಾಧಿಕಾರಿಗಳಾದ ವಕೀಲ ಚಂದ್ರಶೇಖರ್, ಶ್ಯಾಮ್ ಪ್ರಸಾದ್ ,ನವೀನ್ ಬಾಂಧಕೆರೆ, ಶಶಿಂದ್ರ ಸಾಲ್ಯಾನ್,ವಸಂತ್ ಬೆರ್ನಾಡ್, ಮಹಿಮ್ ಹೆಗ್ದೆ,ಹಳೆಯಂಗಡಿ ಗ್ರಾಪಂ ಸದಸ್ಯ ಅಬ್ದುಲ್ ಖಾದರ್, ಪಿ ಸಿ ಕೋಟ್ಯಾನ್, ಮನ್ಸೂರ್ ಹಳೆಯಂಗಡಿ
ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ದಿನೇಶ್ ಹೊಸಲಕ್ಕೆ, ದಾಮೋದರ್ ಸಾಲ್ಯಾನ್, ಚಂದ್ರಹಾಸ ಪಡು ತೋಟ ಮತ್ತಿತರರು ಉಪಸ್ಥಿತರಿದ್ದರು



