ದಕ್ಷಿಣ ಕನ್ನಡ : ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಹಾಗೂ ವಾಯ್ಸ್ ಆಫ್ ಆರಾಧನಾ ಸಹಭಾಗಿತ್ವದಲ್ಲಿ ಅಂತರ್ಜಿಲ್ಲಾ ಮಕ್ಕಳ ಸಾಂಸ್ಕೃತಿಕ ಸಮ್ಮೇಳನ ಯಶಸ್ವಿಯಾಗಿ ನೆರವೇರಿತು. ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ತನ್ನ 24 ವರ್ಷಗಳ ಯಶಸ್ವಿ ಸಮಾಜ ಸೇವೆಯನ್ನ ಪೂರ್ಣಗೊಳಿಸಿ ಇದೀಗ 25ನೇ ವರ್ಷಕ್ಕೆ ಕಾಲಿಡುತ್ತಿದ್ದು, ಸಮಾಜಮುಖಿ 25 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ತಿಳಿಸಿದೆ.


ಈಗಾಗಲೇ ಕರಾವಳಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ವಾಯ್ಸ್ ಆಫ್ ಆರಾಧನಾ ಸಂಸ್ಥೆಯು ಗ್ರಾಮೀಣ ಮಕ್ಕಳ ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಕಳೆದ ಕೆಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಇಂದಿನ ಸಾಂಸ್ಕೃತಿಕ ಸಮ್ಮೇಳನದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಪ್ರತಿಭೆಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಯಿತು, ಈ ಸಹಭಾಗಿತ್ವದಲ್ಲಿ ಮೂಡಿಬಂದ ಸಾಂಸ್ಕೃತಿಕ ಸಮ್ಮೇಳನ ಸಂಪೂರ್ಣ ಯಶಸ್ವಿಯಾಯಿತು. ಮುಂಜಾನೆ 8:30ರ ಸುಮಾರಿಗೆ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸುವುದರೊಂದಿಗೆ ಆರಂಭಗೊಂಡ ಕಾರ್ಯಕ್ರಮ ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಸಂಜೆ ಸುಮಾರು 6 ಗಂಟೆ ತನಕ ಅನಾವರಣಗೊಂಡ ಸಂಗೀತ,ನಾಟ್ಯ, ಯಕ್ಷಗಾನ, ಭರತನಾಟ್ಯ, ಫಿಲ್ಮಿ ಡ್ಯಾನ್ಸ್, ಜಾನಪದ ನೃತ್ಯ, ನೃತ್ಯ ಭಜನೆ, ಚಂಡೆ ವಾದನ, ಫ್ಯಾಶನ್ ಶೋ ಯೋಗ, ಚಲನಚಿತ್ರ ಹಾಡುಗಳು,ಭಕ್ತಿಗೀತೆಗಳು, ಹೀಗೆ ಹತ್ತು ಹಲವು ಕಾರ್ಯಕ್ರಮಗಳು ನೋಡುಗರನ್ನ ಆಶ್ಚರ್ಯ ಚಕಿತರಾಗುವಂತೆ ಮಾಡಿತು, ಮಕ್ಕಳ ಅಪ್ರತಿಮ ಪ್ರತಿಭೆಗಳು ರಂಗಮಂದಿರದಲ್ಲಿ ಪ್ರದರ್ಶಿಸಲ್ಪಟ್ಟಿತು, ನೆರೆದ ಸಭಿಕರಿಂದ ಮತ್ತು ಮಕ್ಕಳ ಪೋಷಕರಿಂದ ಆನಂದದ ಚಪ್ಪಾಳೆ ಹಾಗೂ ಉತ್ತೇಜನ ಮಕ್ಕಳನ್ನು ಹೆಚ್ಚಿನ ಉತ್ಸಾಹ ದೊಂದಿಗೆ ಕಾರ್ಯಕ್ರಮ ನೀಡುವಂತೆ ಪ್ರೇರೇಪಿಸಿ ಕಾರ್ಯಕ್ರಮ ಸಂಪೂರ್ಣ ಯಶಸ್ವಿ ಎನಿಸಿತು.

ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಇದರ ಸರ್ವ ಸದಸ್ಯರ ಆದಿಯಾಗಿ ನಿಕಟ ಪೂರ್ವ ಅಧ್ಯಕ್ಷರುಗಳು ಹಾಗೂ ಸಮಾಜದ ಗಣ್ಯರು, ಆಮಂತ್ರಿಸಲು ಉಪಸ್ಥಿತರಿದ್ದರು . ವಾಯ್ಸ್ ಆಫ್ ಆರಾಧನಾ ತಂಡದಿಂದ ಚಲನಚಿತ್ರ ನಟಿ ನಿರೂಪಕಿ ಆರಾಧನಾ ಭಟ್ ಸಹಿತ ತಂಡದ ಮುಖ್ಯಸ್ಥರು, ಹಿತಚಿಂತಕರು, ಪ್ರೋತ್ಸಾಹಕರು, ಮಕ್ಕಳಪೋಷಕರು, ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಕಾರ್ಯಕ್ರಮದ ಯಶಸ್ವಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಭೆಗಳಿಗೆ ಪ್ರಶಂಸಾ ಪತ್ರ ಮತ್ತು ಗೌರವ ಸ್ಮರಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ಇದೇ ಸಂದರ್ಭದಲ್ಲಿ ವಾಯ್ಸ್ ಆಫ್ ಆರಾಧನಾ ತಂಡದ ಮುಖ್ಯಸ್ಥೆ ಶ್ರೀಮತಿ ಪದ್ಮಶ್ರೀ ಭಟ್ ಹಾಗೂ ಅಗರಿ ರಾಘವೇಂದ್ರ ರಾವ್ ಇವರನ್ನು ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಹಲವಾರು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು . ಈ ಶುಭ ಸಂದರ್ಭದಲ್ಲಿ ಊರ ಪರವೂರ ನಾಗರಿಕರು, ಮಕ್ಕಳ ಪೋಷಕರು, ಕಾರ್ಯಕ್ರಮದ ಯಶಸ್ವಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿ, ಮುಂದೆ ಎಲ್ಲಾ ಕಾರ್ಯಕ್ರಮಗಳಿಗೂ ಕೈಜೋಡಿಸುವ ಭರವಸೆ ನೀಡುವುದರೊಂದಿಗೆ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.








