ಬಂಟ್ವಾಳ:ಸರಣಿ ಅಂಗಡಿಗೆ ನುಗ್ಗಿ ಕಳವು ಮಾಡಿದ ಘಟನೆ ಬಿಸಿರೋಡಿನ ಕೈಕಂಬ ಎಂಬಲ್ಲಿ ನಡೆದಿದೆ. ಬಿ.ಸಿ.ರೋಡಿನ ಕೈಕಂಬದಲ್ಲಿ ಒಟ್ಟು 12 ಅಂಗಡಿಗಳಿಗೆ ಕಳ್ಳನೋರ್ವ ನುಗ್ಗಿ ಜಾಲಾಡಿ ಬಳಿಕ ಮೂರು ಅಂಗಡಿಗಳಿಗೆ ನುಗ್ಗಿದ್ದಾನೆ.

ಇದರಲ್ಲಿ ಮೂರು ಅಂಗಡಿಗಳಿoದ ಸುಮಾರು 61 ಸಾವಿರ ರೂ ಕಳವು ಮಾಡಿದ್ದಾನೆ ಇಲ್ಲಿನ ಡಿಶ್ ಟಿ.ವಿ .ರಿಚಾರ್ಜ್ ಅಂಗಡಿಯೊoದರಲ್ಲಿ ಇಡಲಾಗಿದ್ದ ಸುಮಾರು 52 ಸಾವಿರ ನಗದು, ಸಾಯಿ ಲೀಲಾ ಹೋಟೆಲ್ ನ 6ಸಾವಿರ ಹಾಗೂ ಇನ್ನೊಂದು ಅಂಗಡಿಯಿAದ 3 ಸಾವಿರ ರೂ ನಗದು ಕಳವು ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ.

ಕಳ್ಳ ಇಲ್ಲಿನ ಹೊಟೇಲ್, ಸಹಕಾರಿ ಸಂಘಗಳ ಕಚೇರಿ ಸಹಿತ ಮತ್ತಿತರ ಅಂಗಡಿಗಳಿಗೆ ನುಗ್ಗಿ ಜಾಲಾಡಿ ವಾಪಸು ಹೋಗಿದ್ದಾನೆ. ರಾತ್ರಿ ವೇಳೆ ಭಾರಿ ಮಳೆ ಇದ್ದು, ಕಳ್ಳ ಇದೇ ಸಮಯವನ್ನು ಬಂಡವಾಳವಾಗಿಸಿಕೊoಡು ಕಳವು ಮಾಡಿರಬೇಕು ಎಂದು ಹೇಳಲಾಗಿದೆ. ಕಳ್ಳ ನೋರ್ವ ಬೈಕಿನಲ್ಲಿ ಬಂದು ಆ ಬಳಿಕ ಹೆಲ್ಮಟ್ ಧರಿಸಿ ಅಂಗಡಿಗಳಿಗೆ ನುಗ್ಗಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ,ಕಳ್ಳ ನಿಗಾಗಿ ಬಲೆ ಬೀಸಿದ್ದಾರೆ.



