ಮೂಡುಬಿದಿರೆ:ಅಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪುತ್ತಿಗೆಯ ಪ್ಯಾಲೇಸ್ ಗೌಂಡ್‌ನಲ್ಲಿ ಇದೇ ಬರುವ 14 ರಿಂದ 17ರವರೆಗೆ ಆಯೋಜಿಸಿರುವ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಉತ್ಸವಕ್ಕೆ ಬರುವ ಕಲಾಪ್ರೇಮಿಗಳನ್ನು ಸ್ವಾಗತಿಸಲು ವೈವಿಧ್ಯಮಯ ಪುಷ್ಪಗಳ ಪ್ರದರ್ಶನಕ್ಕೆ ಕೃಷಿ ಸಿರಿ ಆವರಣ ಸಜ್ಜುಗೊಂಡಿದೆ.
ವಿರಾಸತ್‌ನಲ್ಲಿ ಕೃಷಿ ಸಂಸ್ಕೃತಿಗೆ ಒತ್ತು ನೀಡುವ ಸಲುವಾಗಿ ಕೃಷಿಯಲ್ಲಿ ಬೀಜದಿಂದ ಮಾರುಕಟ್ಟೆ ವರೆಗಿನ ವಿವಿಧ ಆಯಾಮಗಳ ಚಿತ್ರಣವನ್ನು ಕೃಷಿಮೇಳ ನೀಡಲಿದೆ. ಈ ಹಿನ್ನೆಲೆಯಲ್ಲಿ ಕೃಷಿ ಸಿರಿ ಅವರಣದ ಹಾರೆಯ ಎತ್ತರದ ಜಾಗದ ಉದ್ದಕ್ಕೂ ಹಸಿರು ಪುಷ್ಪಗಳು ನಳ ನಳಿಸುತ್ತಿವೆ.
ವಿವಿಧ ತಳಿಯ ಸಸಿಗಳನ್ನು ಹೂಕುಂಡದಲ್ಲಿಟ್ಟು ಬೆಳೆಸುತ್ತಿದ್ದು ವಿರಾಸತ್ ವೇಳೆ ಪ್ರದರ್ಶನಗೊಳ್ಳಲಿವೆ. ಫಲ ಹಾಗೂ ಪುಷ್ಪ ಸಂಸ್ಕೃತಿಯ ಅತಿಥ್ಯ ಇಲ್ಲಿ ಸೊಗಯಿಸಲಿದೆ. ಬಯಲು ಸೀಮೆ, ಉತ್ತರ ಕರ್ನಾಟಕ, ಮಹಾರಾಷ್ಟ್ರ ಮುಂತಾದ ಪ್ರದೇಶಗಳಲ್ಲಿ ಹೇರಳವಾಗಿ ಸಿಗುವ ಹೂ, ತರಕಾರಿ, ಹಣ್ಣುಗಳ ಪರಿಚಯ, ಪ್ರದರ್ಶನ ವಿರಾಸತ್ ಮೇಳದಲ್ಲಿ ಇರಲಿದೆ. ದೇಶ ವಿದೇಶಗಳ ತಳಿಗಳು, ದೇಶಿ ತಳಿಗಳು, ಕಸಿ ಮಾಡಿದ ವೈವಿಧ್ಯಮಯ ಫಲಗಳು ಸಿಗಲಿವೆ. ಹೂ ಹಣ್ಣುಗಳಿಂದ ಮಾಡಿದ ಕಲಾಕೃತಿಗಳೂ ಮನ ಸೆಳೆಯಲು ಸಿದ್ಧಗೊಂಡಿವೆ. ಕೃಷಿ ಸಿರಿ ಅವರಣ 2 ಲಕ್ಷ ಹೂಗಳಿಂದ ಶೃಂಗಾರಗೊಳ್ಳಲಿದ್ದು ಒಂದೂವರೆ ಲಕ್ಷ ಗಿಡಗಳ ನಾಟಿ ಕಾರ್ಯ ಮುಗಿದಿದೆ. 50 ಸಾವಿರ ಗಿಡಗಳು ಪೂನಾ ಮತ್ತಿತರ ಕಡೆಗಳಿಂದ ಬರಲಿವೆ. ಇವುಗಳ ನಿರ್ವಹಣೆ ಮತ್ತು ಪ್ರದರ್ಶನದ ಜವಾಬ್ದಾರಿಯನ್ನು ಪೂನಾದ ಖಾಸಗಿ ಕಂಪೆನಿಗೆ ನೀಡಲಾಗಿದೆ.
ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…
ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…
ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…