ಬOಟ್ವಾಳ:ದನಗಳನ್ನು ಕದ್ದು ತಂದು ಹಿಂಸಾತ್ಮಕ ರೀತಿಯಲ್ಲಿ ಕಾರಿನಲ್ಲಿ ತುಂಬಿಸಿ ವದೆ ಮಾಡಲು ಕೊಂಡು ಹೋಗುವ ವೇಳೆ ಮಿಂಚಿನ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಎಸ್ .ಐ.ರಾಮಕೃಷ್ಣ ನೇತೃತ್ವದ ತಂಡ ದನಗಳನ್ನು ಸೇಫ್ ಮಾಡಿದ್ದು, ಆರೋಪಿಗಳು ಪರಾರಿಯಾದ ಘಟನೆ ಲೊರೆಟ್ಟುಪದವು ಬಳಿ ನಡೆದಿದೆ.
ಲೊರೆಟ್ಟೊಪದವು ಸಮೀಪದ ಟಿಪ್ಪು ನಗರ ಎಂಬಲ್ಲಿ ಪೊಲೀಸರು ಬೆನ್ನಟ್ಟಿ ದನಗಳನ್ನು ವಶಪಡಿಸಿಕೊಂಡಿದ್ದಾರೆ. ಓಮ್ನಿ ಕಾರಿನಲ್ಲಿ ಐದು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೈ ಕಾಲು ಕಟ್ಟಿ ತುಂಬಿಸಲಾಗಿತ್ತು. ಜಾಬೀರ್ ಮತ್ತು ನಾಸೀರ್ ಎಂಬವರು ಕಾರು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಎಸ್. ಐ.ರಾಮಕೃಷ್ಣ ಅವರು ರೌಂಡ್ಸ್ನಲ್ಲಿದ್ದ ಸಂದರ್ಭದಲ್ಲಿ ಓಮ್ನಿ ಕಾರೊಂದರ ಮೇಲೆ ಸಂಶಯಗೊOಡು ಬೆನ್ನು ಬಿದ್ದಾಗ ಅತೀ ವೇಗದೊಂದಿಗೆ ಕಾರು ಹೋಗುವುದು ಕಂಡು ಬಂದಿದೆ.
ಎಸ್.ಐ.ಅವರ ಸಂಶಯ ಬಲಗೊಂಡು ಲೊರೆಟ್ಟೊಪದವಿನಿಂದ ಬೆನ್ನಟ್ಟಿದಾಗ ಕಾರು ಟಿಪ್ಪುನಗರ ಕಡೆಗೆ ಹೋಗಿ ಕಾರನ್ನು ಅಲ್ಲೇ ಬಿಟ್ಟು ಚಾಲಕ ಮತ್ತು ಕಾರಿನಲ್ಲಿದ್ದ ಇನ್ನೋರ್ವ ಎಸ್ಕೇಪ್ ಆಗಿದ್ದಾರೆ. ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಇಬ್ಬರು ಕೂಡ ಈ ಹಿಂದೆ ದನ ಕಳವು ಪ್ರಕರಣದ ಪ್ರಮುಖ ಆರೋಪಿಗಳೆಂದು ತಿಳಿದು ಬಂದಿದೆ.
ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…
ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…
ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…