ಹಳೆಯಂಗಡಿ :ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು, ಹಳೆಯಂಗಡಿ ಇಲ್ಲಿನ ಧೃಢಕಲಶಾಭಿಷೇಕ ಆದಿತ್ಯವಾರ ಬೆಳಿಗ್ಗೆ ಗಂಟೆ 5.00ರಿಂದ ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಪ್ರಾಯಶ್ಚಿತ ಹೋಮ, ಗಣಯಾಗ, ಕಲಶಾಧಿವಾಸ, ಪ್ರಧಾನ ಹೋಮವನ್ನು ಮಕರ ಲಗ್ನದಲ್ಲಿ ದೃಢಕಲಶಾಭಿಷೇಕ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ಜರಗಿತು.



ದೇವಸ್ಥಾನದ ಪ್ರಧಾನ ಅರ್ಚಕರಾದ ಮಧುಸೂದನ್ ಆಚಾರ್ಯ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರಿದಾಸ್ ಭಟ್ ಮತ್ತು ಸಮಿತಿ ಸದಸ್ಯರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಉಪಾಧ್ಯಕ್ಷರಾದ ಮೋಹನ್ ದಾಸ್ ಮತ್ತು ಸಮಿತಿ ಸದಸ್ಯರು ಉಪ ತಹಶಿಲ್ದಾರ್ ದಿಲೀಪ್ ರೋಡ್ಕರ್ ಮಾಜಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಭುವನಾಭಿರಾಮ ಉಡುಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ,ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಕಸ್ತೂರಿಪಂಜ, ಪಡುಪಣಂಬೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಹೇಮನಾಥ ಅಮೀನ್ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಗುರುರಾಜ್ ಎಸ್ ಪೂಜಾರಿ, ಗ್ರಾಮಸ್ಥರಾದ ಪುರುಷೋತ್ತಮ ಕೋಟ್ಯಾನ್, ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮಸ್ಥರು ದೇವಾಲಯದ ಸಿಬ್ಬಂದಿ ವರ್ಗ,ಭಕ್ತರು ಉಪಸ್ಥಿತರಿದ್ದರು.



