ಮುಲ್ಕಿ: ಒಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಮುಲ್ಕಿ ವಿಜಯ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಒಳಲಂಕೆ ಪ್ರೀಮಿಯರ್ ಲೀಗ್ 2023 ಜಿ ಎಸ್ ಬಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಅಂತಿಮ ರೋಮಾಂಚಕಾರಿ ಪಂದ್ಯದಲ್ಲಿ ಆಲ್ಫಾ ಟ್ರೂಪರ್ ಮುಂಬೈ ತಂಡವು ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್ ಮಣಿಪಾಲ ತಂಡವನ್ನು ಸೋಲಿಸಿ ಒಳಲಂಕೆ ಪ್ರೀಮಿಯರ್ ಲೀಗ್ 2023 ಟ್ರೋಫಿ ಹಾಗೂ ನಗದು 2,34,567 ಗಳಿಸಿದರೆ, ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್ ಮಣಿಪಾಲ ರನ್ನರ್ಸ್ ಅಪ್ ಟ್ರೋಫಿ ಹಾಗೂ ನಗದು ರೂ.1,45,678 ಹಾಗೂ ಡೆಡ್ಲಿ ಪ್ಯಾಂಥರ್ಸ್ ತಂಡವು ದ್ವಿತೀಯ\ ರನ್ನರ್ಸ್ ಅಪ್ ಟ್ರೋಫಿ ಹಾಗೂ ನಗದು ರೂ77,77 7 ಪಡೆಯಿತು.



ಅಂತಿಮ ಪಂದ್ಯದ ಪಂದ್ಯ ಶ್ರೇಷ್ಠರಾಗಿ ಎರಡು ಸಿಕ್ಸರ್ ಹೊಡೆದು ಪಂದ್ಯದ ಗತಿಯನ್ನೇ ಬದಲಾಯಿಸಿದ ಮುಂಬೈ ತಂಡದ ದತ್ತೇಶ್ ರವರು ಪ್ರಶಸ್ತಿ ಪಡೆದರೆ ಉಳಿದಂತೆ ಉತ್ತಮ ದಾಂಡಿಗ ಹಾಗೂ ಎಸೆತಗಾರ ಪ್ರಶಸ್ತಿಯನ್ನು ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್ ಮಣಿಪಾಲ ತಂಡದ ಅಮೆ ಹಾಗು ಸೂರಜ್ ರವರು ಐಪಿಎಲ್ ಕ್ಯಾಪ್ ನೊಂದಿಗೆ ಪ್ರಶಸ್ತಿ ಸ್ವೀಕರಿಸಿದರು. ಸರಣಿ ಶ್ರೇಷ್ಠ ರಾಗಿ ಮುಂಬೈ ತಂಡದ ಚಿರಾಗ್, ಎಮರ್ಜಿಂಗ್ ಪ್ಲೇಯರ್ – ಆದೇಶ ಭಟ್ ,ಉತ್ತಮ ಕ್ಷೇತ್ರರಕ್ಷಕ ಪ್ರಶಸ್ತಿ ಡೆಡ್ಲಿ ಪ್ಯಾಂಥರ್ಸ್ ತಂಡದ ಹರಿ ಪಡೆದರು
ಅಂತಿಮ ಅಂತಿಮ ಪಂದ್ಯಾಟದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನ ಜಾಯಿಂಟ್ ಸೆಕ್ರೆಟರಿ ಡಾ. ಪಿ ವಿ ಶೆಟ್ಟಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯಾಟದ ಮೂಲಕ ಎಳೆ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಅಭಿನಂದನೀಯ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಲ್ಕಿ ನಗರ ಪಂಚಾಯತ್ ಮಾಜೀ ಅಧ್ಯಕ್ಷ ಸುಭಾಶ್ ಶೆಟ್ಟಿ, ಉದ್ಯಮಿ ಪ್ರಬೋದ್ ಕುಡ್ವ , ನಾರಾಯಣ ಶೆಣೈ ಸುನಿಲ್ ಬಾಳಿಗಾ, ವೀಣಾ ಭಟ್, ಜಿಎಸ್‌ಬಿ ಸಭಾದ ಅಧ್ಯಕ್ಷ ಸತ್ಯೇಂದ್ರ ಶೆಣೈ, ಪ್ರಜೇಶ್ ಭಟ್, ಗಣೇಶ್ ಭಟ್, ರಮನಾಥ್ ಪೈ, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ನ ಅಧ್ಯಕ್ಷ ಸುಧೀರ್ ಬಾಳಿಗಾ,ಶಿವಾನಂದ ಪ್ರಭು,ಒಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ವಿಶ್ವನಾಥ ಭಟ್, ಸುನಿಲ್ ಕಾಮತ್, ವೀಣಾ ಭಟ್, ನಾಗೇಶ್ ಪೈ, ಬಾಬುರಾಯ ಪ್ರಭು, ಸವಿತಾ ಬಾಳಿಗ, ಹರೀಶ್ ಕಾಮತ್
ಪ್ರೀತಮ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು ವಕೀಲ ಸತೀಶ್ ಕಾಮತ್, ಸುರೇಶ್ ಭಟ್ ನಿರೂಪಿಸಿದರು, ವಿಶ್ವನಾಥ ಶೆಣೈ ಧನ್ಯವಾದ ಅರ್ಪಿಸಿದರು.



