ಕರಾವಳಿ

ಸಿಂಗಾರ ಸಿರಿಗೆ ಪ್ರೇಕ್ಷಕರ ಕೊಂಗಾಟ, ಗೊಂಬೆ ಗಾಯನದಲ್ಲಿ ಮೋಹನ ಆಳ್ವ ಬಣ್ಣನೆವಿಜಯ್ ಪ್ರಕಾಶ್ ಗಾನಕ್ಕೆ ವಿರಾಸತ್ `ಜೈ ಹೋ…’

ಸಿಂಗಾರ ಸಿರಿಗೆ ಪ್ರೇಕ್ಷಕರ ಕೊಂಗಾಟ, ಗೊಂಬೆ ಗಾಯನದಲ್ಲಿ ಮೋಹನ ಆಳ್ವ ಬಣ್ಣನೆ
ವಿಜಯ್ ಪ್ರಕಾಶ್ ಗಾನಕ್ಕೆ ವಿರಾಸತ್ `ಜೈ ಹೋ…’

ಮೂಡುಬಿದಿರೆ: ಸಂಗೀತ ಸಿರಿಯ ಕೆನ್ನೆಯ ಮೇಲೆ ಪ್ರೀತಿಯ ಕೆಂಬಣ್ಣದಂತೆ ವಿರಾಸತ್' ವೇದಿಕೆಯು ಭಾನುವಾರ ಸಂಜೆ ವಿಜಯ್ ಪ್ರಕಾಶ್ ಹಾಗೂ ಸಂಗಡಿಗರ ರಸಸಂಜೆಗೆ ಸಾಕ್ಷಿಯಾಯಿತು. ಶ್ರೋತೃಗಳಜೈ ಹೋ…’
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ೨೯ನೇ ವರ್ಷದ ಆಳ್ವಾಸ್ ವಿರಾಸತ್‌ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಭಾನುವಾರ ರಾಗಗಳದ್ದೇ ನರ್ತನ. ಕನ್ನಡ ಹಾಡುಗಳ ರೋಮಾಂಚನ.
ಭಜರಂಗಿ' ಸಿನಿಮಾದನಂದ ನಂದ ಶ್ರೀ ಕೃಷ್ಣ ನನ್ನ ಬಂಧುವೇ ನೀ ಶ್ರೀ ಕೃಷ್ಣ’ ಹಾಡಿನ ಮೂಲಕ ಕಾಮನಬಿಲ್ಲಿನ ಬೆಳಕಿನ ವೇದಿಕೆಗೆ ಬಂದ ನೇರಳೆ ಧಿರಿಸಿನ ಮುದ್ದು ಮೊಗದ ಅಪ್ಪನ ಪ್ರೀತಿಯ ಹುಡುಗಿ ಅನುರಾಧ ಭಟ್, ಸಂಗೀತ ರಸಸಂಜೆಗೆ ಮುನ್ನುಡಿ ಬರೆದರು. ತಂದೆಯ ಬೆವರ ಹನಿಗೆ ಮಕ್ಕಳ ಪ್ರೀತಿಯ ಮುತ್ತುಗಳನ್ನು ತೊಡಿಸಿದ, ತಾನೇ ಚೌಕ' ಸಿನಿಮಾಕ್ಕೆ ಹಾಡಿದನಾನು ನೋಡಿದ ಮೊದಲ ವೀರ … ಅಪ್ಪಾ ಐ ಲವ್ ಯೂ ಪಾ’ .. ಹಾಡಿದಾಗ ಪ್ರೇಕ್ಷಕ ವರ್ಗದಲ್ಲಿನ ತಂದೆ- ಮಗಳು- ಮಗ ಮಾತ್ರವಲ್ಲ ತಾಯಿಯಂದಿರೂ ಭಾವುಕರಾದರು.
ವರನಟ ರಾಜ್ ಕುಮಾರ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ತಂದ ಜೀವನ ಚೈತ್ರ' ಸಿನಿಮಾದನಾದಮಯ.. ಈ ಲೋಕವೆಲ್ಲ ಆ ಆ ಆ’ ಹಾಡನ್ನು ಶ್ರೀ ಹರ್ಷ ಸುಧೆಯಾಗಿಸಿದರು. ಸೇರಿದ ಪ್ರೇಕ್ಷಕರಿಗೆ ಕಾಶಿ ಹರಿದ್ವಾರದ ದರ್ಶನವನ್ನು ವಿರಾಸತ್ ಸಭಾಂಗಣದಲ್ಲಿ ನೀಡಿದರು.


ಈ ರೀತಿಯ ನಾದ ಕೇಳಲು ಮೂಡುಬಿದಿರೆಗೇ ಬರಬೇಕು. ಪ್ರತಿ ಹಾಡೂ ಮತ್ತೆ ಮತ್ತೆ ಹಾಡುವಾಗ ನನಗೆ ಹೊಸತು. ಅದಕ್ಕೆ ಕೇಳುಗರೇ ಕಾರಣ' ಎಂದ ವಿಜಯ್ ಪ್ರಕಾಶ್ ಅವರು,ಡಾ.ಮೋಹನ ಆಳ್ವ ಅವರಿಗೆ ನಾವೆಲ್ಲ ಸೇರಿ ಗೌರವಿಸುವ’ ಎನ್ನುತ್ತಲೇ, ಗೊಂಬೆ ಹೇಳುತ್ತೈತೆ ಮತ್ತೆ ಹೇಳುತ್ತೈತೆ...' ಎಂದು ತಮ್ಮ ನಿಷ್ಕಲ್ಮಶ ಮುಗ್ಧ ಭಾವಲಹರಿಯಲ್ಲೇ ಮುದ್ದಾಡಿದರು. ಪಿಯಾನೋ ನಾದಕ್ಕೆ ಪ್ರೇಕ್ಷಕರೆಲ್ಲಗೊಂಬೆ ಹೇಳುತ್ತೈತೆ… ಭಾರತ ಹೇಳುತ್ತೈತೆ ನೀನೇ ರಾಜಕುಮಾರ..’ ಎಂದು ಹಾಡಿ ಡಾ.ಎಂ.ಮೋಹನ ಆಳ್ವ ಅವರನ್ನು ತೋರಿಸಿದರು.
ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ' ಎಂಬಕಿರಕ್ ಪಾರ್ಟಿ’ ಹಾಡಿಗೆ ಪ್ರೇಕ್ಷರದ್ದೇ ಕೋರಸ್… ಅರ್ರರೇ ಅರ್ರರೇ... ಅಯ್ಯಯ್ಯೋ' ಎಂಬ ಝೇಂಕಾರ. ಕೈ ಬೀಸುತ್ತಾ ಸಾಗರದ ಅಲೆಯನ್ನೇ ಪ್ರೇಕ್ಷಕರು ಸೃಷ್ಟಿಸಿದರು. ವಿಜಯ್ ಪ್ರಕಾಶ್ ಹಾಡಿನ ವೇಗ ಹೆಚ್ಚಿಸಿದಾಗ ವಿದ್ಯಾರ್ಥಿಗಳೆಲ್ಲ ಜೊತೆ ಹಾಡಿದರು. ಆಗ ತಮ್ಮ ಮೊಬೈಲ್ ಲೈಟ್ ತೆಗೆದ ಜನರುಮಿಂಚುಳ್ಳಿ ಲೋಕ’ವನ್ನೇ ಸೃಷ್ಟಿಸಿದರು.
ಬಳಿಕ ಕಾಂತಾರಾ'ದಸಿಂಗಾರ ಸಿರಿ…’ ಪ್ರೇಮ ಪರ್ವ. ವಿಜಯ್ ಪ್ರಕಾಶ್ ಜೊತೆ ಅನುರಾಧ ಭಟ್ ಗೀತೆ ಹಾಡಿದರು. ...ಮನದ ಮಗು ಹಠ ಮಾಡಿದೆ..' ಎಂದಾಗ ವಿದ್ಯಾರ್ಥಿಗಳಕೊಂಗಾಟ’. ಸಂಜೆಯ ಕೆನ್ನೆಯ ಮೇಲೆ … ಎಂದು ವಿಜಯ್ ಪ್ರಕಾಶ್ ಹಾಡುವಾಗ ಪ್ರೀತಿಯ ಕೆಂಬಣ್ಣದAತೆ ವಿರಾಸತ್ ವೇದಿಕೆ ಕಂಗೊಳಿಸಿತು.


ಗಾಯಕಿ ಐಶ್ವರ್ಯ ರಂಗರಾಜನ್ ಅವರು, ಅಯಿಗಿರಿ ನಂದಿನಿ' ಹಾಡಿನ ಮೂಲಕ ಭಕ್ತಿ ಲಯ ಹೊಮ್ಮಿಸಿದರು.ಎಲ್ಲಿ ಕಾಣಿ… ಎಲ್ಲಿ ಕಾಣಿರಾ… ಎಲ್ಲವ್ವ ನಿಮ್ಮ…’ ಸಾಲಿನಲ್ಲಿ ಸವದತ್ತಿ ಎಲ್ಲಮ್ಮನ ಸ್ತುತಿಸಿದರು. ಆಗ ಹೊಮ್ಮಿದ್ದು ಉಧೋ ಉಧೋ' ಎಂಬ ಜೈಕಾರ. ಮಲೈ ಮಹದೇಶ್ವರನನ್ನು (ಶಿವ) ಆರಾಧಿಸುವಸೋಜುಗಾದ ಸೂಜಿ ಮಲ್ಲಿಗೆ .. ಮಹಾದೇವ ಮಂಡೆ ಮೇಲೆ ದುಂಡು ಮಲ್ಲಿಗೆ’ ಎಂದು ಗಾಯಕಿ ಶಾಶ್ವತಿ ಕಶ್ಯಪ್ ಹಾಡಿದಾಗ ಮಹಾದೇವ... ಮಹಾದೇವ...' ಅನುರಣನ. ಸರಿಗಮಪ ಖ್ಯಾತಿಯ ಶ್ರೀ ಹರ್ಷ ಅವರುಬೆಂಕಿಯಲ್ಲಿ ಅರಳಿದ ಹೂ’ ಚಿತ್ರದ ತಾಳಿ ಕಟ್ಟುವ ಶುಭ ವೇಳೆ..' ಮಿಮಿಕ್ರಿ ಮಿಶ್ರಿತ ಗಾನ ಹರಿಸಿದರು. ಮೊಲ, ನರಿ, ಜಿಂಕೆ, ಗಿಳಿ, ಆನೆ, ಕೋಗಿಲೆ ಸೇರಿದಂತೆ ಪ್ರಾಣಿ ಪಕ್ಷಿಗಳ ಸ್ವರ ಹೊಮ್ಮಿಸಿದರು. ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ’ ಹಾಡುವ ಮೂಲಕ ಗಾಯಕ ನಿಖಿಲ್ ಪಾರ್ಥಸಾರಥಿ, ಕನ್ನಡಿಗರ ಕಣ್ಮಣಿ ಪುನೀತ್ ರಾಜ್ ಕುಮಾರ್ ನೆನಪಿಸಿದರು. ಆಗ ಎಲ್ಲೆಡ ‘ತನನಾನ ತನನಾನ ತನಾನನ…’ ನಿನಾದದ ಕಂಪನ.
ಯುಗಳ ಗೀತೆಯನ್ನು ಗಾಯಕಿ- ಗಾಯಕ ಹಾಡುತ್ತಾರೆ. ಕೋಟಿಗೊಬ್ಬ' ಸಿನಿಮಾಕ್ಕೆ ವಿಜಯ್ ಪ್ರಕಾಶ್ ಹಾಗೂ ಶ್ರೇಯಾ ಘೋಷಾಲ್,ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ’ ಹಾಡಿದ್ದರು. ವಿರಾಸತ್ ವೇದಿಕೆಯಲ್ಲಿ ಶನಿವಾರ ಖುದ್ದು ಶ್ರೇಯಾ ಘೋಷಾಲ್ ಇದನ್ನು ಹಾಡಿದ್ದರೆ, ಭಾನುವಾರ ವಿಜಯ್ ಪ್ರಕಾಶ್ ಹಾಡಿದರು. ವಿಜಯ್ ಗೆ ಅವರಿಗೆ ಐಶ್ವರ್ಯ ರಂಗರಾಜನ್ ಸಾಥ್ ನೀಡಿದರು.


ಅನಂತರ ತುಳುನಾಡಿನ ಪುಳಕ ನೀಡಿದ ವಿಜಯ್ ಪ್ರಕಾಶ್ ಅವರು ಗಟ್ಟದಾ ಅಂಚಿದಾಯೆ ತೆಂಕಾಯಿ ಬತ್ತ್ ದ್ ತೂಯೇ... ಆಲೆನಾ ಪೊರ್ಲುಗು ಅಯ್ಯಯ್ಯೋ' ಎಂದು ರಕ್ಷಿತ್ ಶೆಟ್ಟಿ ಅನನ್ಯ ಸಿನಿ ಪ್ರಯೋಗದ ಉಳಿದವರು ಕಂಡAತೆ’ಯ ದೃಶ್ಯ ಕಾವ್ಯದ ರಾಗ ಹರಿಸಿದರು.
ಇದು ಚರಿತ್ರೆ ಸೃಷ್ಟಿಸೋ ಅವತಾರ.' ಎಂದುಅವನೇ ಶ್ರೀಮನ್ ನಾರಾಯಣ’ ಸಿನಿಮಾದ ಹಾಡು ಹಾಡಿದರು.
ರಾಬರ್ಟ್ ಸಿನಿಮಾದ ಗೆಳೆತನ ಸಾರುವ ದೋಸ್ತಾ ಕಣೋ...' ಹಾಡನ್ನು ನಿಖಿಲ್ ಪಾರ್ಥಸಾರಥಿ ಜೊತೆ ವಿಜಯ್ ಪ್ರಕಾಶ್ ಹಾಡಿದರು.ಸಿಸ್ಟರ್ ಫ್ರಂ ಅನದರ್ ಮದರ್ ..’. ಎಂದು ಹೆಣ್ಣುಮಕ್ಕಳಿಗೆ ಗೌರವ ಸಲ್ಲಿಸಿದರು. ಅಲ್ಲದೇ, ಇಲ್ಲಿರುವ ಎಲ್ಲರೂ ನನ್ನ ಸಹೋದರಿಯರು. ನನ್ನ ಹೆಂಡತಿ ಒಬ್ಬಳನ್ನು ಬಿಟ್ಟು' ಎಂದು ವಿಜಯ್ ಪ್ರಕಾಶ್ ಹೇಳಿದಾಗ ನಗೆಗಡಲಲ್ಲಿ ಸಭಾಂಗಣ ಮಿಂದೆದ್ದಿತು. ಬಳಿಕ ಅನುರಾಧಾ ಭಟ್ ಅವರು ಹಿಂದಿಯಮೇರೆ ಡೋಲುನಾ’ ಹಾಡಿದರು.
ರಸಸಂಜೆಯ ಕೊನೆ ಘಟ್ಟದಲ್ಲಿ ಹೊಮ್ಮಿದ್ದು ಶಿವನ ರುದ್ರ ನರ್ತನದ ಅಬ್ಬರದ ಸಂಗೀತ. ಶಿವನನ್ನು ಪಂಚಭೂತ ಕಲ್ಪನೆಯಲ್ಲಿ ಕರ್ನಾಟಕ, ಹಿಂದೂಸ್ತಾನಿ, ಜನಪದ, ಪಾಶ್ಚಾತ್ಯ ಪ್ರಕಾರಗಳ ಫ್ಯೂಷನ್ ನಲ್ಲಿ ಪ್ರಸ್ತುತ ಪಡಿಸಿದ ಓಂಕಾರ ನಾದವು ಪ್ರವೀಣ್ ಡಿ. ರಾವ್ ಸಂಯೋಜನೆಯಲ್ಲಿ ಮೂಡಿಬಂತು.ಓಂ ನಮೋ ಶಿವಾಯಾ’ ನಾದವು ಮೇರೆ ಏರಿತು.
ಅಂತ್ಯದಲ್ಲಿ ಜೈ ಹೋ' ಝೇಂಕಾರವು ಮುಗಿಲು ಮುಟ್ಟಿತು. ೨೦೦೮ರಲ್ಲಿ ಆಸ್ಕರ್ ಗೆದ್ದಜೈ ಹೋ’, ಹಾಡಿಗೆ ಮನ್ನಣೆ ಪಡೆದ ನಾಲ್ಕು ಕಲಾವಿದರಲ್ಲಿ ವಿಜಯ್ ಪ್ರಕಾಶ್ ಕೂಡ ಒಬ್ಬರು. ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಹಾಡು ಗ್ರ‍್ಯಾಮಿ ಪ್ರಶಸ್ತಿಯನ್ನು ಸಹ ಗೆದ್ದಿದೆ. ಹೀಗಾಗಿ ವಿಜಯ್ ಪ್ರಕಾಶ್ ಬದುಕಿಗೆ `ಜೈ ಹೋ’ ಅನನ್ಯ
ಅರುಣ್ ಕುಮಾರ್ ( ಡ್ರಮ್ಸ್ ), ವೇಣುಗೋಪಾಲ್ ರಾಜು ( ತಬಲ ), ಪ್ರದ್ಯುಮ್ನ ( ತಬಲ ), ಪ್ರವೀಣ್ ಷಣ್ಮುಗಮ್ (ರಿಧಮ್ ಪ್ಯಾಡ್ಸ್ ), ಸುಮುಖ್ (ಪಾರ್ಕ್ಟ್ಯೂಷನ್ ), ಗೆರ್ರಿ ಅರ್ನೆಸ್ಟ್ (ಲೀಡ್ ಗಿಟಾರ್ ), ಬೃತ್ವ ಕಾಲೆಬ್ (ಬಸ್ಸ್ ಗಿಟಾರ್), ಹರ್ಷವರ್ಧನ್ ರಾಜ್ ( ಕೀ ಬೋರ್ಡ್ ), ಆಕಾಶ್ ಪರ್ವ ( ಕೀ ಬೋರ್ಡ್ ), ಬಿ. ರವಿಶಂಕರ್ (ಮೃದಂಗ), ಪ್ರವೀಣ್ ಡಿ ರಾವ್ (ಸಂಯೋಜನೆ ) ಸಹಕರಿಸಿದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…

18 hours ago

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…

18 hours ago

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…

18 hours ago

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…

18 hours ago

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…

18 hours ago

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…

2 days ago