ಬಂಟ್ವಾಳ: ಹಟ್ಟಿಯ ಹೊರಗಡೆ ಕಟ್ಟಿ ಹಾಕಿದ್ದ ಸಣ್ಣ ಕರುವೊಂದನ್ನು ಚಿರತೆ ಕೊಂದು ತಿಂದ ಘಟನೆ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯ ನೈನಾಡು ಎಂಬಲ್ಲಿ ಇಂದು ನಡೆದಿದೆ.
ನೈನಾಡು ವಿಠಲ ಶೆಟ್ಟಿ ಎಂಬವರ ಮನೆಯ ಸುಮಾರು 6 ತಿಂಗಳು ಕರುವನ್ನು ಚಿರತೆ ಕೊಂದು ಅರ್ಧ ತಿಂದು ಹಾಕಿದೆ.ಮನೆಯ ಸಮೀಪದಲ್ಲಿರುವ ಹಟ್ಟಿಯ ಹೊರಗಡೆ ಈ ಒಂದು ಕರುವನ್ನು ಕಟ್ಟಿಹಾಕಲಾಗಿತ್ತು.
ಮಧ್ಯರಾತ್ರಿ ವೇಳೆ ಚಿರತೆ ಕರುವನ್ನು ಕೊಂಡುಹೋಗಿರಬಹುದು ಎಂದು ಶಂಕಿಸಲಾಗಿದೆ
ನಾಯಿಗಳು ಬೊಗಳಿದೆಯಾದರು ಚಿರತೆ ಬಂದು ಈ ತರಹ ಮಾಡಬಹುದು ಎಂಬುದು ತಿಳಿದಿರಲಿಲ್ಲ ಎಂದು ಮನೆಯವರು ಹೇಳುತ್ತಾರೆ.
ಯಾಕೆಂದರೆ ಈವರೆಗೆ ಪರಿಸರದಲ್ಲಿ ಚಿರತೆ ದಾಳಿ ಬಗ್ಗೆ ತಿಳಿದಿಲ್ಲ. ಹಾಗಾಗಿ ನಾಯಿಗಳು ಅಷ್ಟು ಜೋರಾಗಿ ಬೊಗಳಿದರೂ ಇಂತಹ ಯೋಚನೆ ಬಂದಿರಲಿಲ್ಲ.
ಹಟ್ಟಿಯಿಂದ ಸುಮಾರು 50 ಮೀ.ದೂರದ ಅಡಿಕೆ ತೋಟಕ್ಕೆ ಕರುವನ್ನು ಎಳೆದುಕೊಂಡು ಹೋಗಿ ಕೊಂದುಬಳಿಕ ತಿಂದಿದೆ. ಘಟನೆಯ ಬಗ್ಗೆ ಅರಣ್ಯ ಇಲಾಖೆ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…