ನಿಡ್ಡೋಡಿ ಸಂತ ತೆರಜಮ್ಮ ದೇವಾಲಯ ಚರ್ಚ್ ಆವರಣದಲ್ಲಿ ಸೌಹಾರ್ದ ಕ್ರಿಸ್ಮಸ್ 2023 ಆಚರಿಸಲಾಯಿತು ಸರ್ವ ಧರ್ಮಿಯ ಸಂವಾದ ಮತ್ತು ಯುವ ಆಯೋಗದ ಜಂಟಿ ಆಶ್ರಯದಲ್ಲಿ ಸರ್ವ ಧರ್ಮಿಯರ ಜೊತೆಗೂಡಿ ಚರ್ಚಿನ ಆವರಣದಲ್ಲಿ ಆಚರಿಸಲಾಯಿತು.ಕಾರ್ಯಕ್ರಮದ ಅತಿಥಿಗಳಾಗಿ ಮಾಜಿ ಶಾಸಕರು ಸಚಿವ ಕೆ. ಅಭಯಚಂದ್ರ ಜೈನ್ ಹಾಗೂ ಮೂಡುಬಿದಿರೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನ ಸನ್ಮಾನಿಸಲಾಯಿತು.

ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೊನಾಲ್ಡ್ ಸಿಲ್ವನ್ ಡಿಸೋಜ, ಕಲಾವಿದ ಸದಾಶಿವ ಪೂಜಾರಿ, ಆರದಿರಲಿ ಬದುಕು ಆರಾಧನಾ ಸಂಸ್ಥೆಯ ನಿರ್ದೇಶಕಿ ಪದ್ಮಶ್ರೀ ಭಟ್, ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ ಲೆರೊಯ್ ಪಿಂಟೊ ಅವರನ್ನು ಸನ್ಮಾನಿಸಲಾಯಿತು. ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ.ಡೇನಿಸ್ ಸುವಾರಿಸ್ ಸ್ವಾಗತಿಸಿದರು, ಕಾರ್ಯದರ್ಶಿ ಜೀವನ್ ಕ್ರಾಸ್ತಾ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು

. ಉಪಾಧ್ಯಕ್ಷರಾದ ಜೆಸಿಂತಾ ಡಿಸೋಜ ವಂದಿಸಿದರು. ರೇಶ್ಮಾ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಜೋನ್ ಕಾರ್ಡೋಜ, ಭಗಿನಿ ಸಿಸ್ಟರ್ ಸೆವ್ರಿನ್ ಫೆರ್ನಾಂಡಿಸ್, ಕಿಶೋರ್ ಡಿಸೋಜ ಇನ್ನಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕ್ರಿಸ್ಮಸ್ ಕ್ಯಾರಲ್ಸ್ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸರ್ವರಿಗೂ ಕ್ರಿಸ್ಮಸ್ ತಿನಿಸುಗಳನ್ನು ಹಂಚಲಾಯಿತು.






