ಶ್ರೀನಿವಾಸ ಕಲ್ಯಾಣೋತ್ಸವದ ಕರಪತ್ರ ಹಂಚುವ ಮೂಲಕ ಮತದಾರರಿಗೆ ಅಮಿಷ ಹೇರಲಾಗುತ್ತಿವೆ ಎಂದು ಪುತ್ತಿಲ ಪರಿವಾರಕ್ಕೆ ಚುನಾವಣಾ ನೋಡಲ್ ಅಧಿಕಾರಿಯಿಂದ ನೋಟೀಸ್ ಕಳುಹಿಸಲಾಗಿದೆ.

ಪುತ್ತಿಲ ಪರಿವಾರದಿಂದ ಶ್ರೀನಿವಾಸ ಕಲ್ಯಾಣೋತ್ಸವ ನಡೆದಿದ್ದು, ತನ್ನ ಕರಪತ್ರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಪುತ್ತಿಲ ಪರಿವಾರ ಚಿಹ್ನೆ ಪ್ರಕಟಿಸಿ ಹಂಚುತ್ತಿದ್ದಾರೆ ಎನ್ನಲಾಗಿದೆ. ಡಿ. 27 ರಂದು ಪುತ್ತೂರು ನಗರಸಭೆಯ ತೆರವಾದ ಎರಡು ಸ್ಥಾನಗಳ ಉಪಚುನಾವಣೆ ನಡೆಯಲಿದ್ದು, ನೆಲ್ಲಿಕಟ್ಟೆ ಮತ್ತು ರಕ್ತೇಶ್ವರಿ ವಾರ್ಡ್ನಲ್ಲಿ ಸ್ಪರ್ಧಿಸುತ್ತಿರುವ ಪುತ್ತಿಲ ಪರಿವಾರದ ಅಭ್ಯರ್ಥಿಗಳಿಗೆ ನೋಟೀಸ್ ನೀಡಲಾಗಿದೆ. ಅನ್ನಪೂರ್ಣ ಕೆ.ಎಸ್.ರಾವ್ ಮತ್ತು ಚಿಂತನ್.ಪಿ ಯವರಿಗೆ ನೋಟೀಸ್ ಕಳುಹಿಸಲಾಗಿದ್ದು, ಮತದಾರರಿಗೆ ಉಚಿತ ಊಟ, ಹಣ,ಬಟ್ಟೆ, ದೇವರ ಪ್ರಸಾದ ನೀಡುವ ಅಮಿಷ ಹೇರಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಸಂಬAಧಿಸಿದ ಫಲಕಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ.



