ಉಡುಪಿ: ಹಿಂದಿನ ಬಿಜೆಪಿ ಸರಕಾರ ಕಸಿದುಕೊಂಡಿದ್ದ ಸಂವಿಧಾನಿಕ ಹಕ್ಕನ್ನು ಮತ್ತೆ ತಂದುಕೊಡುವಲ್ಲಿ ಸಿದ್ದರಾಮಯ್ಯ ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಎಂದು ಎಪಿಸಿಆರ್ ಸಂಘಟನೆಯ ಮುಖ್ಯಸ್ಥ ಹುಸೇನ್ ಕೋಡಿಬೆಂಗ್ರೆ ಹೇಳಿದರು.

ಹಿಜಾಬ್ ನಿಷೇಧ ಆದೇಶ ವಾಪಾಸ್ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ನಿಷೇಧದಿಂದ ಸಾವಿರಾರು ವಿದ್ಯಾರ್ಥಿನಿಯರ ಶಿಕ್ಷಣ ನಿರ್ನಾಮ ಆಗಿತ್ತು. ಈಗ ಸಿದ್ದರಾಮಯ್ಯ ಸರಕಾರ ಮತ್ತೆ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅವಕಾಶ ಕೊಟ್ಟಿದೆ. ವಿದ್ಯಾರ್ಥಿನಿಯರು ಶಿರವಸ್ತ್ರ ಬೇಕು ಎಂದು ಡಿಮಾಂಡ್ ಮಾಡಿದ್ದರು. ಸಿದ್ದರಾಮಯ್ಯ ಸರ್ಕಾರ ಅದನ್ನು ತೆರವು ಮಾಡಿದೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿನಿಯರಿಗೆ ಮತ್ತೆ ಶಿಕ್ಷಣ ಪಡೆಯಲು ಸಾಧ್ಯವಾಗಲಿದೆ. ಮುಖ್ಯಮಂತ್ರಿಗಳಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ. ಒಂದೆರಡು ವಾರದಲ್ಲಿ ಆದೇಶದ ಪ್ರತಿ ಕಾಲೇಜುಗಳಿಗೆ ತಲುಪಬಹುದು ಎಂದರು.



