ಜನ ಮನದ ನಾಡಿ ಮಿಡಿತ

Advertisement

ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳು–ಮಹಾತ್ಮ ಗಾಂಧಿ ಮ್ಯೂಸಿಯಂ ಉದ್ಘಾಟನೆ

ಮಂಗಳೂರು: ಡಿ 23, ಮಂಗಳೂರಿನ ಪ್ರತಿಷ್ಠಿತ ಕೆನರಾ ಸಮೂಹ ಶಿಕ್ಷಣ ಸಂಸ್ಥೆ ಮಂಗಳೂರು ಇದರ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮ್ಮಿಲನ-2023 ಆದಿತ್ಯವಾರದಂದು ಕೆನರಾ ಪ್ರೌಢಶಾಲೆ,ಕೊಡಿಯಾಲ್ ಬೈಲ್ ಇಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಶತಮಾನಗಳಷ್ಟು ಹಳೆಯದಾದ ಮಹಾತ್ಮ ಗಾಂಧಿ ಮ್ಯೂಸಿಯಂನ ಉದ್ಘಾಟನೆಯು ನೆರವೇರಿತು.ಭಾರತ ಸರಕಾರದ ಪುರಾತತ್ವ ಮತ್ತುಉತ್ಖನನ ಇಲಾಖೆಯ ಮಾಜಿ ನಿರ್ದೇಶಕರಾದ ಶ್ರೀ ರಾಮಚಂದ್ರ ಹೆಗಡೆ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಮಾಜಿ ಪ್ರಾಧ್ಯಾಪಕರು ಶ್ರೀ ಮುರುಗೇಶ್ ತುರುವೇಕೆರೆ, ಕೇರಳ ಸರ್ಕಾರದ ಪುರಾತತ್ವ ಇಲಾಖೆಯ ಡಾ.ವಿ.ಆರ್.ಶಾಜಿ, ಶ್ರೀ ಪ್ರಭಾಕರ ಕಿಣಿ , ಶ್ರೀ ರಾಮದಾಸ್ ಪ್ರಭು,ಮಹಾತ್ಮ ಗಾಂಧಿ ಮ್ಯೂಸಿಯಂನ ಪುನರ್ವಿನ್ಯಾಸಕ್ಕೆ ಕೊಡುಗೆ ನೀಡಿದ ಶ್ರೀ ಸುಜಯ್ ಲೋಬೋ ದೀಪ ಬೆಳಗಿಸಿ ಮ್ಯೂಸಿಯಂ ನ ಉದ್ಘಾಟನೆ ಮಾಡಿದರು. ಮ್ಯೂಸಿಯಂ ನಿರ್ದೇಶಕರಾದ ಶ್ರೀ ಪಯ್ಯನೂರು ರಮೇಶ್ ಪೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೆನರಾ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮಾವೇಶದ ದಿನ ಜರುಗಿದ ಈ ವಿಶಿಷ್ಟ ಪೂರ್ಣ ಕಾರ್ಯಕ್ರಮವು ಪುರಾತನ ವಸ್ತುಗಳು ಹಾಗೂ ಶಾಸನ ಶಾಸ್ತ್ರದ ಆಸಕ್ತಿ ಉಳ್ಳವರ ಮನಸೆಳೆಯಿತು. ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಈ ಮ್ಯೂಸಿಯಂನ ವೀಕ್ಷಣೆಗೆ ಮುಕ್ತ ಅವಕಾಶವನ್ನು ನೀಡಲಾಯಿತು.

ಕೆನರಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ವಾಸುದೇವ ಕಾಮತ್, ಕಾರ್ಯದರ್ಶಿ ಶ್ರೀ ಎಂ.ರಂಗನಾಥ್ ಭಟ್,ಸದಸ್ಯರಾದ ಶ್ರೀ ಸುರೇಶ್ ಕಾಮತ್ ,ಶ್ರೀ ಗೋಪಾಲಕೃಷ್ಣ ಶೆಣೈ CA ಎಂ.ವಾಮನ್ ಕಾಮತ್, ಶ್ರೀ ಬಸ್ತಿ ಪುರುಷೋತ್ತಮ ಶೆಣೈ, ಶ್ರೀ ಶಿವಾನಂದ ಶೆಣೈ, ಶ್ರೀ ಯೋಗೀಶ್ ಕಾಮತ್, ಶ್ರೀ ನರೇಶ್ ಶೆಣೈ, ಶ್ರೀಮತಿ ಅಶ್ವಿನಿ ಕಾಮತ್, ಶ್ರೀ ಗೋಪಿನಾಥ್ ಭಟ್, ಶ್ರೀ ಯೋಗೀಶ್ ಕಾಮತ್, ಆಡಳಿತ ಅಧಿಕಾರಿ ಡಾ. ದೀಪ್ತಿ ನಾಯಕ್, ಪಿ ಆರ್ ಒ ಶ್ರೀಮತಿ ಉಜ್ವಲ್ ಮಲ್ಯ, ಸಮ್ಮಿಲನದ ಉಸ್ತುವಾರಿ ಶ್ರೀ ಗೋಪಾಲಕೃಷ್ಣ ಶೆಟ್ಟಿ,ಕೆನರಾ ಸಹೋದರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರುಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ,ಸಂಸ್ಥೆಯ ಹಳೆಯ ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

ಬಂಟ್ವಾಳ: ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮೃ*ತದೇಹ ಪ*ತ್ತೆ….!

ಮಂಗಳೂರು: ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತವಾಗುವ ಅಪಾಯವಿದೆ- ಫಣೀಂದ್ರ ಕೆ ಎಚ್ಚರ!

error: Content is protected !!