ಉಡುಪಿ:ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಉಡುಪಿಯ ಗೀತಾಮಂದಿರದಲ್ಲಿ ಗೀತಾಜಯಂತಿ ಉತ್ಸವ ನಡೆಯಿತು.


ವಿದ್ವಾನ್ ಶತಾವಧಾನಿ ಡಾ. ರಾಮನಾಥ ಆಚಾರ್ಯ ಉತ್ಸವಕ್ಕೆ ಚಾಲನೆ ನೀಡಿ, ಕೃಷ್ಣನ ಗೀತೆಯ ಸಾರದ ಬಗ್ಗೆ ಸಂದೇಶ ನೀಡಿದ್ದಾರೆ. ಹಿರಿಯ ವಿದ್ವಾಂಸ ಮಧ್ವರಮಣ ಆಚಾರ್ಯ ಮಾತನಾಡಿ, ಪೋಷಕರು ಈಗಲೇ ಮಕ್ಕಳಲ್ಲಿ ಗೀತಾಭ್ಯಾಸವನ್ನು ಮಾಡಿಸಿ, ಹಿಂದೂ ಸಂಸ್ಕೃತಿಯನ್ನು ಉಳಿಸುವಂತಾಗಬೇಕು ಎಂದರು. ಬಳಿಕ ಗೀತಾ ಮಾತೆಯರಿಂದ ಗೀತಾ ಪಾರಾಯಣ ನಡೆದಿದೆ.



