ಮಂಗಳೂರು:ತುಳುನಾಡ ಅದ್ಭುತ ಕಲಾವಿದ ನವೀನ್ ಡಿ ಪಡೀಲ್ ಇವರಿಗೆ ‘ಮೂಗಜ್ಜನ ಕೋಳಿ’ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರ ಅಕಾಡೆಮಿಯ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತುಳುನಾಡ ಕುಸಲ್ದರಸೆ ಖ್ಯಾತಿಯ ನವೀನ್ ಡಿ ಪಡೀಲ್ ಇವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

ಸಂತೋಷ್ ಮಾಡ ಇವರು ನಿರ್ದೇಶಿಸಿದ ಮೊದಲ ಅರೆಭಾಷೆ ಚಿತ್ರವಾದ ಮೂಗಜ್ಜನ ಕೋಳಿ ಚಿತ್ರದಲ್ಲಿ ಮುಖ್ಯ ಭೂಮಿಕೆಯಾದ ಮೂಗಜ್ಜನ ಪಾತ್ರವನ್ನು ನವೀನ್ ಡಿ ಪಡೀಲ್ ಇವರು ನಿರ್ವಹಿಸಿದ್ದಾರೆ.
ಇಡೀ ಸಿನಿಮಾದಲ್ಲಿ ಒಂದೇ ಒಂದು ಮಾತಿಲ್ಲದ, ಕೋಳಿಗಳನ್ನು ಪ್ರೀತಿಸುವ ಒರಟು ಮುದುಕನ ಪಾತ್ರವನ್ನುಇವರು ಅತ್ಯಂತ ಸುಂದರವಾಗಿ ನಿಭಾಯಿಸಿದ್ದಾರೆ. ಇದ್ದಕಾಗಿ ಇವರಿಗೆ ಈಗ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

“ನಮ್ಮ ಕನಸು ಪ್ರೊಡಕ್ಷನ್ಸ್” ಎಂಬ ಬ್ಯಾನರಿನಡಿಯಲ್ಲಿ ಕೆ.ಸುರೇಶ್. ಅವರು ನಿರ್ಮಿಸಿರುವ ಚೊಚ್ಚಲ ಚಿತ್ರವೇ ಮೂಗಜ್ಜನ ಕೋಳಿ. ರಾಷ್ಟ್ರಪ್ರಶಸ್ತಿ ವಿಜೇತ, ಖ್ಯಾತ ಸಂಕಲನಕಾರ ಸುರೇಶ್ ಅರಸ್ ಇವರು ಚಿತ್ರದ ಸಂಕಲನ ಮಾಡಿದ್ದಾರೆ. ಇನ್ನು ಮೂಗಜ್ಜನ ಕೋಳಿ ಚಿತ್ರವು 2024ರ ಮೊದಲಾರ್ಧದಲ್ಲಿ ತೆರೆಗೆ ಬರಲಿದೆ ಎಂದು ನಿರ್ಮಾಪಕರಾದ ಕೆ. ಸುರೇಶ್ ತಿಳಿಸಿದ್ದಾರೆ.



