ಹೊಸ ವರ್ಷದ ಸಂಭ್ರಮಾಚರಣೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ. ಇಂತಹ ಸಮಯದಲ್ಲಿ ಎಣ್ಣೆ ಪ್ರಿಯರು ಮದ್ಯ ಖರೀದಿಸಲು ಮದ್ಯದ ಮಳಿಗೆಗೆ ಪ್ರವೇಶಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಗ್ಯಾಂಗ್ ಮದ್ಯ ಖರೀದಿಸುವ ನೆಪದಲ್ಲಿ ಕೈಚಳಕ ತೋರಿಸಿದ ಘಟನೆ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ.

ಪ್ರವಾಸಿಗರು ಕಣ್ಣೆದುರೆ 8000 ರೂ ಮೌಲ್ಯದ ಬಿಯರ್ ಕದ್ದೊಯ್ದಿದ್ದಾರೆ. ಕುಶಾಲನಗರ ಪಟ್ಟಣದಲ್ಲಿರುವ ನ್ಯಾಷನಲ್ ವೈನ್ಸ್ ಮಳಿಗೆಗೆ ಆಗಮಿಸಿದ ಮೂವರ ತಂಡದಿಂದ ಈ ಕೃತ್ಯ ನಡೆದಿದೆ.
ಮಳಿಗೆಗೆ ಪ್ರವೇಶಿಸಿದ ತಂಡದಿಂದ ಎರಡು ಕೇಸ್ ದುಬಾರಿ ಬಿಯರ್ ಖರೀದಿ ಮಾಡಿದ್ದಾರೆ. ಸ್ಕ್ಯಾನ್ ಮಾಡಿದಂತೆ ನಾಟಕವಾಡಿ ಕೊನೆಗೆ ಬಿಯರ್ ನೊಂದಿಗೆ ಪರಾರಿಯಾಗಿದ್ದಾರೆ. ಇನ್ನು ಪ್ರವಾಸಿಗರ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.



