ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿಯ ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ ವಹಿಸಿ ಮಾತನಾಡಿ ಸೇವಾ ಸಂಸ್ಥೆಗಳು ಅಸಹಾಯಕರ ಧ್ವನಿಯಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸವಲತ್ತುಗಳನ್ನು ಒದಗಿಸಲು ಶ್ರಮಿಸುತ್ತಿರುವುದು ಅಭಿನಂದನೀಯವಾಗಿದ್ದು ನಿರಂತರವಾಗಿ ನಡೆಯಲಿ ಎಂದರು.


ಪಡುಪಣಂಬೂರು ಗ್ರಾ.ಪಂ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್,ತಾ.ಪಂ.ಮಾಜೀ ಸದಸ್ಯ ದಿವಾಕರ್ ಕರ್ಕೇರ, ಮಂಗಳೂರು ನೆಹರು ಯುವ ಕೇಂದ್ರದ ಆಡಳಿತಾದಿಕಾರಿ ಜಗದೀಶ್ ಕೆ.,ಹರಿಪ್ರಸಾದ್ ಶೆಟ್ಟಿ, ತೋಕೂರುಗುತ್ತು ,ಕ್ಲಬ್ನ ಗೌರವಾಧ್ಯಕ್ಷ ಗುರುರಾಜ್ ಎಸ್ ಪೂಜಾರಿ, ಅಧ್ಯಕ್ಷ ಭಾಸ್ಕರ್ ಅಮೀನ್, ಮಹಿಳಾ ಮಂಡಲ ಅಧ್ಯಕ್ಷೆ ಪ್ರೇಮಲತಾ ಯೋಗಿಶ್, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಮೊದಲ ತುಳು ಪಿ.ಎಚ್.ಡಿ. ಅಧ್ಯಯನ ಗ್ರಂಥ ರಚನೆಗಾರ ಡಾ. ವಿ. ಕೆ ಯಾದವ್, ವೃಕ್ಷ ಪ್ರೇಮಿ ವಿನೇಶ್ ಪೂಜಾರಿ ನಿಡ್ಡೋಡಿ,ಎರ್ಮಾಳು ಸ.ಪ. ಕಾಲೇಜಿನ ಪ್ರಾಚಾರ್ಯೆ ಡಾ. ಜ್ಯೋತಿ ಚೇಳಾಯರು, ಕ್ರೀಡಾ ಸಾಧಕ ಶಶಾಂಕ್ ಎನ್ ಅಮೀನ್ ರನ್ನು ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು , ವಿದ್ಯಾನಿಧಿ ವಿತರಣೆ, ಪ್ರತಿಭಾ ಪುರಸ್ಕಾರ ಆರೋಗ್ಯ ನಿಧಿ ವಿತರಣೆ ನಡೆಯಿತು
ಸಂಪತ್ ಶೆಟ್ಟಿ ತೋಕೂರು ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.



