ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ (ನಿ) ಕಟೀಲು ಇದರ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ನವಂಬರ್ 26 ರಂದು ನಡೆದ ಚುನಾವಣೆಯಲ್ಲಿ ಬಹುಮತದಿಂದ ಹೊಸ ನಿರ್ದೇಶಕರಾಗಿ ಕುಮುದಾ ಶಂಕರ್ ಶೆಟ್ಟಿ ಮತ್ತು ಅಮೂಲ್ಯ ಉಮೇಶ್ ಶೆಟ್ಟಿಆಯ್ಕೆ ಯಾಗಿ ಹಾಗೆಯೇ ಡಿಸೆಂಬರ್ 11ರಂದು ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಹುಮತದಿಂದ ಅಮೂಲ್ಯ ಶೆಟ್ಟಿಯವರು ಆಯ್ಕೆಯಾದರು.

ನಿರ್ದೇಶಕರಾಗಿ ಸುಜಾತ ಎನ್, ಕುಮುದಾ ಶೆಟ್ಟಿ, ವಸಂತಿ ಎನ್. ಶೆಟ್ಟಿ, ಪ್ರೇಮಲತಾ ಸುವರ್ಣ, ಅಪ್ಪಿ ಮುಂಡಾಲ,ಐರಿನ್ ತಾವುರೋ, ರೂಪ ಶೆಟ್ಟಿ, ಪುಷ್ಪ ಜೆ ಶೆಟ್ಟಿ,ಯೋಗಿನಿ, ಶೀಲಾ ಶೆಟ್ಟಿ ಹೀಗೆ 11 ಮಂದಿ ಆಯ್ಕೆಗೊಂಡಿದ್ದಾರೆ.



