ಬಂಟ್ವಾಳ:ಕಳೆದ ಕೆಲವು ದಿನಗಳಿಂದ ಬಿಸಿರೋಡಿನಲ್ಲಿ ನಿತ್ಯ ಪಿಕ್ ಪಾಕೆಟ್ ಪ್ರಕರಣವೇ ಹೆಚ್ಚುತ್ತಿದೆ. ಮೊಬೈಲ್ , ಪರ್ಸ್ ಗಳನ್ನು ಪಿಕ್ ಪಾಕೆಟ್ ಮಾಡುತ್ತಿದ್ದು, ಅನೇಕರು ಸೊತ್ತುಗಳನ್ನು ಕಳೆದುಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಕೆಲ ದಿನಗಳ ಹಿಂದೆ ತರಕಾರಿ ಅಂಗಡಿಯೊAದರಿAದ ಮಾಲಕನ ಮೊಬೈಲ್ ಕಳ್ಳತನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಸಿರೋಡಿನ ವೆಂಕಟೇಶ್ ಎಂಬವರ ಮೊಬೈಲ್ ತರಕಾರಿ ಅಂಗಡಿಯಿoದ ಕಳವಾಗಿತ್ತು. ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಆದರೆ ಇದೀಗ ಅವರ ಅಂಗಡಿಯ ಸಿ.ಸಿ.ಕ್ಯಾಮಾರದಲ್ಲಿ ಸೆರೆಯಾದ ಮೊಬೈಲ್ ಕಳವು ಮಾಡುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಪರಂಗಿಪೇಟೆ ನಿವಾಸಿ ಅಬುಬಕ್ಕರ್ ಎಂಬವರ ಸುಮಾರು 15 ಸಾವಿರ ನಗದನ್ನು ಕಳವು ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಮೆಲ್ಕಾರ್ ನಿಂದ ಬಿಸಿರೋಡಿಗೆ ಬಸ್ ನಲ್ಲಿ ಬರುವ ವೇಳೆ ಎದುರುಕಡೆ ಅಂಗಿಯ ಕಿಸೆಯಲ್ಲಿದ್ದ ೧೫ ಸಾವಿರ ಹಣವನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಬಿಸಿರೋಡಿನ ಪರಿಸರದಲ್ಲಿ ಹೆಚ್ಚುತ್ತಿರುವ ಪಿಕ್ ಪಾಕೆಟ್ ಹಾವಳಿಯಿಂದ ಜನರು ಪೇಟೆಯತ್ತ ಬರಲು ಹೆದರುತ್ತಿದ್ದಾರೆ. ನಿತ್ಯ ಪಿಕ್ ಪಾಕೆಟ್ ಗಳು ನಡೆಯುತ್ತಿರುವುದಿಂದ ವ್ಯಾಪಾರಸ್ಥರು ಕೂಡ ಕಂಗಾಲಿದ್ದಾರೆ. ಹಾಗಾಗಿ ಪೋಲೀಸರು ಹೆಚ್ಚುವರಿಯಾಗಿ ಗಸ್ತು ಹಾಗೂ ಸಿಸಿ ಕ್ಯಾಮರಾಗಳ ಅಳವಡಿಕೆಗೆ ಹೆಚ್ಚು ಒತ್ತು ನೀಡುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.



