ಮಂಗಳೂರು:ಮoಗಳೂರಿನ ಟೌನ್ ಹಾಲ್‌ನಲ್ಲಿ ‘ಮಂಗಳೂರು ಮಲಯಾಳಿ ಸಂಗಮ 2024 ಕಾರ್ಯಕ್ರಮವು ಇದೇ ಬರುವ ಜನವರಿ 6 ರಂದು ನಡೆಯಲಿದೆ ಎಂದು ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಬೋರ್ಡ್ ನಿರ್ದೇಶಕರಾದ ಮುರಳಿ ಎಚ್ ಹೇಳಿದ್ದಾರೆ.

ಇವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಾರ್ಯಕ್ರಮವನ್ನು ಕೇರಳ ಸಮಾಜಂ (ರಿ) ಮಂಗಳೂರು ಅವರು ಸಂಘಟಿಸುತ್ತಿದ್ದು, ಇವರಿಗೆ ಇತರ ಸಮಾನ ಮನಸ್ಕ ಸಂಘಟನೆಗಳು ಸಾಥ್ ನೀಡಿದ್ದಾರೆ. ಹೊಸ ವರ್ಷದ ಹಿನ್ನಲೆಯಲ್ಲಿ ನಡೆಯುತ್ತಿರುವ ಈ ಮಂಗಳೂರು ಮಲಯಾಳಿ ಸಂಗಮವು ಜಾತಿ, ಸಮುದಾಯ ಹಾಗು ಧರ್ಮಗಳನ್ನು ಮೀರಿ ವೈವಿದ್ಯಮಯ ಹಿನ್ನೆಲೆ ಇರುವ ವ್ಯಕ್ತಿ ಮತ್ತು ಸಂಘಟನೆಗಳ ಮಧ್ಯ ಏಕತೆ ಮತ್ತು ಬಾಂಧವ್ಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ಸಂಗಮವು ನಮ್ಮ ಸಮುದಾಯವನ್ನು ಒಂದುಗೂಡಿಸುವುದರೊAದಿಗೆ ನಮ್ಮ ಭವ್ಯ ಪರಂಪರೆಯನ್ನು ನೆನಪಿಸುವ ಕಾರ್ಯಕ್ರಮವಾಘಲಿ ಅಂತ ಹೇಳಿದ್ದಾರೆ.



