ದಕ್ಷಿಣ ಕನ್ನಡ :- ನವಸುಮ ರಂಗಮಂಚ( ರಿ ) ಪ್ರಕಾಶನದ ಎರಡು ತುಳು ನಾಟಕ ಕೃತಿಗಳ ಬಿಡುಗಡೆ ಮಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.


ಅಕ್ಷತಾ ರಾಜ್ ಪೆರ್ಲ ಇವರ ” ಮಂದಾರ ಮಲಕ ” ಹಾಗೂ ಬಾಲಕೃಷ್ಣ ಕೊಡವೂರು ಇವರ “ಮಾಯದಪ್ಪೆ ಮಾಯಕಂದಾಲ್” ಎಂಬ ಎರಡು ನಾಟಕ ಕೃತಿಗಳು ಬಿಡುಗಡೆಗೊಂಡ ತುಳು ನಾಟಕ ಕೃತಿಗಳಾಗಿದ್ದು, ಕೃತಿಗಳನ್ನು ರಂಗಭೂಮಿ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ಕೃತಿ ಬಿಡುಗಡೆಗೊಳಿಸಿದರು.

ಕೃತಿಗಳ ಪರಿಚಯವನ್ನು ಹೆಸರಾಂತ ನಾಟಕ ರಚನೆಕಾರ ಹಾಗೂ ಯುವ ನ್ಯಾಯವಾದಿ ಶಶಿರಾಜ್ ರಾವ್ ಕಾವೂರು ಹಾಗೂ ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು ಇದರ ನಿವೃತ್ತ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ರಾಮಚಂದ್ರ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಮಂದಾರ ರಾಜೇಶ್ ಭಟ್ ಹಾಗೂ ಮಂದಾರ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಸಪ್ರೆ, ಹಾಗೂ ಹಿತೈಷಿಗಳಾದ ಪ್ರೊಫೆಸರ್ ಗೋವಿಂದ ಭಟ್ಟ ಕನ್ನಡಗುಳಿ, ಡಾ. ನಾ ದಾಮೋದರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರ್ವಹಣೆ ಮತ್ತು ಉಪಸ್ಥಿತರ ಪರಿಚಯ ಮತ್ತು ಸ್ವಾಗತವನ್ನು ರೇಡಿಯೋ ನಿನಾದ ಎಸ್ ಡಿ ಎಂ ಕಾಲೇಜು ಉಜಿರೆ ಇದರ ಕಾರ್ಯಕ್ರಮ ಸಂಯೋಜಕರಾದ ಕೆ ವಿ ಕಡಬ ನಿರ್ವಹಿಸಿದರು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು. ಇವರ ಸಹಕಾರದೊಂದಿಗೆ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿತು.



