ದಕ್ಷಿಣ ಕನ್ನಡ : ಬೇಜಿಲ್ ಮೆಂಡಿಸ್ ಸ್ಮರಣಾರ್ಥ ಉಪಶಾಮಕ ಆರೈಕೆ ಮತ್ತು ವೃದ್ದಾರೋಗ್ಯ ಆರೈಕಾ ಕೇಂದ್ರವು ಅಲಂಗಾರಿನ ಮೌಂಟ್ ರೋಜರಿ ಆಸ್ಪತ್ರೆ ವಠಾರದಲ್ಲಿ ಮೊಸ್ಸಿಂಜೊರ್ ಎಡ್ವಿನ್ ಸಿ ಪಿಂಟೊ ಮತ್ತು ಶ್ರೀಮತಿ ಮ್ಯಾಗ್ದಲಿನ್ ಮೆಂಡಿಸ್ ಇವರಿಂದ ಉದ್ಘಾಟಿಸಲ್ಪಟ್ಟಿತು . ಶ್ರೀ ಮ್ಯಾಕ್ಸಿo ಮೆಂಡಿಸ್ ಮತ್ತು ಶ್ರೀಮತಿ ನ್ಯಾನ್ಸಿ ಮೆಂಡಿಸ್ ಜೊತೆಗೆ ಮೆಂಡಿಸ್ ಕುಟುಂಬದ ಎಲ್ಲಾ ಸದಸ್ಯರು ನಾಮಫಲಕವನ್ನು ಅನಾವರಣಗೊಳಿಸಿ, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಅತೀ ವಂದನೀಯ ಪೀಟರ್ ಪೌಲ್ ಸಾಲ್ದಾನ್ಹಾ ಇವರು ಆಶೀರ್ವಚನಗೈದರು. ಹೆಲ್ಪರ್ಸ್ ಆಫ್ ಮೌಂಟ್ ರೋಜರಿ ಸಭೆಯ ಸಿಸ್ಟರ್ಸ್ ನವರು ಪ್ರಾಥನಾವಿಧಿಯನ್ನು ನೆರವೇರಿಸಿದರು.

ದಿವಂಗತ ಬೇಜಿಲ್ ಮೆಂಡಿಸ್ ಇವರು ತನ್ನ ಜೀವನಾವಧಿಯಲ್ಲಿ ಮಾಡಿದ ಉನ್ನತ ಸಮಾಜಸೇವೆಗಳನ್ನು ಸ್ಮರಿಸಿ, ಅವರು ಕಲಿಸಿಕೊಟ್ಟ ಜೀವನದ ಮೌಲ್ಯಗಳನ್ನು ನೆನಪಿಸಿ, ಅವರ ಸವಿನೆನಪಿಗಾಗಿ, ಅವರ ಧರ್ಮಪತ್ನಿ ಶ್ರೀಮತಿ ಮ್ಯಾಗ್ದಲಿನ್ ಮೆಂಡಿಸ್ ಮತ್ತು ಅವರ ಮಕ್ಕಳು ಶ್ರೀ ಮತ್ತು ಶ್ರೀಮತಿ ಮ್ಯಾಕ್ಸಿo ಹಾಗೂ ಶ್ರೀಮತಿ ನ್ಯಾನ್ಸಿ ಮೆಂಡಿಸ್ ರವರ ಮುಖಂಡತ್ವದಲ್ಲಿ ಈ ಉಪಶಾಮಕ ಹಾಗೂ ವೃದ್ದಾರೋಗ್ಯ ಕೇಂದ್ರವನ್ನು ನಿರ್ಮಿಸಿ, ಅದನ್ನು ಅಲಂಗಾರ್,ಹೆಲ್ಪರ್ಸ್ ಆಫ್ ಮೌಂಟ್ ರೋಜರಿ ಸಭೆಯ ಧರ್ಮಭಗಿನಿಯರಿಗೆ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಮೆಂಡಿಸ್ ಕುಟುಂಬದ ಎಲ್ಲಾ ಸದಸ್ಯರು, ಮಿತ್ರರು, ಹಿತೈಶಗಳು, ಅಭಿಮಾನಿಗಳು ಹಾಜರಿದ್ದರು. ಅತೀ ವಂದನೀಯ ಸಿಸ್ಟರ್ ಸುನೀತಾ ಡಿ´ಸೋಜಾ, ಸುಪೀರಿಯರ್ ಜನರಲ್ ರವರು ಎಲ್ಲರಿಗೂ ವಂದಿಸಿ ಸ್ವಾಗತಿಸಿದರು .ಮೊಸ್ಸಿಂಜೊರ್ ಎಡ್ವಿನ್ ಸಿ ಪಿಂಟೊರವರು ಮೆಂಡಿಸ್ ಕುಟುಂಬದ ಉದಾರ ಮನಸ್ಸಿನ ಕೊಡುಗೆಯನ್ನು ಶ್ಲಾಘಿಸಿ ಹೆಲ್ಪರ್ಸ್ ಆಫ್ ಮೌಂಟ್ ರೋಜರಿ ಸಭೆಯ ಸಿಸ್ಟರ್ಸ್ ನವರ ಸೇವೆಯನ್ನು ಸ್ಮರಿಸಿ, ಎಲ್ಲರಿಗೂ ಶುಭಹಾರೈಸಿದರು. ಶ್ರೀಮಾನ್ ಮ್ಯಾಕ್ಸಿo ಮೆಂಡಿಸ್ ಕುಟುಂಬದ ಪರವಾಗಿ ಮಾತನಾಡಿ, ತನ್ನ ತಂದೆಯ ಜೀವನದ ಅತೀ ಉನ್ನತವಾದ ಧಾನದರ್ಮದ ಕೆಲವು ಮೌಲ್ಯಗಳನ್ನು ಎತ್ತಿ ಹಿಡಿದು, ಈ ಮೌಲ್ಯಾಭರಿತ ಸಾಕ್ಷಿಗಳು ಈ ಒಂದು ಸ್ಮರಣಾರ್ಥ ಕೇಂದ್ರವನ್ನು ಸ್ಥಾಪಿಸಲು ಪ್ರೇರಣೆಯಾಯಿತು ಮತ್ತು ಈ ಕೇಂದ್ರದ ಮುಖಾಂತರ ಬಹಳಷ್ಟು ರೋಗಿಗಳಿಗೆ, ವೃದ್ಧರಿಗೆ ಪ್ರೀತಿಯ ಹಾಗೂ ಸಾಂತ್ವನದ ಆರೈಕೆ ಲಭಿಸಲಿ ಎಂದು ಆಶಿಸಿದರು. ಶ್ರೀಮಾನ್ ಚಂದ್ರಶೇಖರ್, ಎಮ್. ಸಿ. ಎಸ್ ಬ್ಯಾಂಕ್ ಮೂಡಬಿದ್ರೆಯ ಅಧಿಕಾರಿಗಳು ಮೆಂಡಿಸ್ ಕುಟುಂಬದ ಉದಾರತೆಯನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಇನ್ನಿತರಅಗತ್ಯಗಳಿಗೆ ಅವರ ಸ್ಪಂದನೆಯನ್ನು ನೆನಪಿಸಿ, ಪರೋಪಕಾರವೇ ಪುಣ್ಯ ಎಂದು ಹಾರೈಸಿದರು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ಪವಿತ್ರ ಬೈಬಲ್ ನ ವಾಕ್ಯಗಳಂತೆ,`ನೀವು ಈ ಧರೆಗೆ ಉಪ್ಪು ಮತ್ತು ಪ್ರಪಂಚಕ್ಕೆ ಬೆಳಕಾಗಬೇಕು ಎಂಬಂತೆ, ಈ ಕೇಂದ್ರದಲ್ಲಿ ಆಗುವ ಸೇವೆಗಳ ಮುಖಾಂತರ ಯೇಸುಕ್ರಿಸ್ತನ ಬೆಳಕು ಎಲ್ಲೆಲ್ಲೂ ಪ್ರಜ್ವಲಿಸಲಿ ಎಂದು ಹರಸಿದರು.ವಂದನೀಯ ಸಿಸ್ಟರ್ ಪ್ರೆಸಿಲ್ಲಾ ಡಿ `ಮೆಲ್ಲೊ ರವರು ಮೆಂಡಿಸ್ ಕುಟುಂಬದ ಉದಾರ ಮನಸ್ಸಿನ ಕೊಡುಗೆಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ, ಮೆಂಡಿಸ್ ಕುಟುಂಬಕ್ಕೆ ಹಾಗೂ ಎಲ್ಲರಿಗೂ ಧನ್ಯವಾದ ಸಮರ್ಪಣೆಗೈದರು. ವಂದನೀಯ ಫಾದರ್ ದೀಪಕ್ಕೆ ನೊರೋನ್ಹ ರವರು ಭೋಜನದ ಮೇಲೆ ಆಶೀರ್ವಾದಗಳನ್ನು ಬೇಡಿದರು.ಎಮ್ ಸಿ ಎಸ್ ಬ್ಯಾಂಕಿನ ಶ್ರೀ ಬಾಹುಬಲಿ ಪ್ರಸಾದ್, ಶ್ರೀಮಾನ್ ಜೋರ್ಚ್ ಮೋನಿಸ್, ಮೂಡಬಿದ್ರಿ ಪುರಸಭೆ ಯ ಶ್ರೀ ಪಿ. ಕೆ ಥೋಮಸ್, ಮೂಡಬಿದ್ರಿ ರೋಟರಿ ಅಧ್ಯಕ್ಷರು, ಶ್ರೀ ವಲ್ಟರ್ ಮತ್ತು ಎಪ್ಪಿ ಡಿ ‘ಸೋಜಾ, ಮೌಂಟ್ ರೋಜರಿ ಆಸ್ಪತ್ರೆಯ ವೈದ್ಯಧಿಕಾರಿಗಳು ಮತ್ತು ವಿವಿಧ ಕಾನ್ವoಟಿನ ಧರ್ಮಭಗಿನಿಯರು ಈ ಸಂದರ್ಭದಲ್ಲಿ ಹಾಜರಿದ್ದರು.




