ವಿಟ್ಲ: ಶತಮಾನದ ಹೊಸ್ತಿಲಲ್ಲಿರುವ ದ.ಕ.ಜಿ.ಪಂಚಾಯತ್ ಉನ್ನತೀಕರಿಸಿದ ಶಾಲೆ ಕೋಡಪದವು ಇಲ್ಲಿನ ಆಹಾರ ಸಾಮಾಗ್ರಿಗಳ ದಾಸ್ತಾನು ಕೊಠಡಿ ಮತ್ತು ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದ ಕಳ್ಳರು ಸೊತ್ತುಗಳಿಗಾಗಿ ಜಾಲಾಡಿದ್ದಾರೆ. ಕೊಠಡಿಯಲ್ಲಿ ಆಹಾರ ಸಾಮಾಗ್ರಿಗಳು ಕಂಡು ಬಂದ ಕಾರಣಕ್ಕಾಗಿ ಮತ್ತೆ ಮುಖ್ಯಶಿಕ್ಷಕರ ಕೊಠಡಿಯೊಳಗೆ ನುಗ್ಗಿದ್ದಾರೆ.
ಮುಂದಿನ ತಿಂಗಳು ಉದ್ಘಾಟನೆಗೊಳ್ಳಲಿರುವ ಎರಡು ನೂತನ ಕೊಠಡಿಗಳಿಗೆ ಶಾಲಾ ಹಿತೈಷಿಗಳು, ದಾನಿಗಳು ನೀಡಿರುವ ಬೆಲೆಬಾಳುವ ವಸ್ತುಗಳು, ಟಿ.ವಿ.,ಕಂಪ್ಯೂಟರ್ ಗಳನ್ನು ಕಳವಿಗೆ ಯತ್ನಿಸಿದ್ದಾರೆ. ಆ ಸಂದರ್ಭ ಯಾವುದೋ ವಾಹನ ಅಥವಾ ಇನ್ನಿತರ ಶಬ್ದ ಕೇಳಿಸಿಕೊಂಡ ಕಳ್ಳರು ಸೊತ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಅಲ್ಲೇ ಬಿಟ್ಟು ಕಾಲ್ಕಿತ್ತಿರುವುದು ಕಂಡುಬಂದಿದೆ. ಸೋಮವಾರ ಬೆಳಿಗ್ಗೆ ಎಂದಿನಂತೆ ಶಾಲಾ ಆರಂಭ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಮೋಹಲತಾ ಟೀಚರ್ ಅವರ ಗಮನಕ್ಕೆ ಕಳವು ಯತ್ನ ತಿಳಿದು ತಕ್ಷಣ ಎಸ್.ಡಿ.ಎಂ.ಸಿ ಅಧ್ಯಕ್ಷರ ಮೂಲಕ 112 ಪೊಲೀಸರಿಗೆ ಮಾಹಿತಿ ತಿಳಿಸಿ ನಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಶಿಕ್ಷಣ ಇಲಾಖೆಗೂ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಕಳ್ಳರ ಕಾಟ ಜಾಸ್ತಿಯಾಗುತ್ತಿದ್ದು ಆರು ತಿಂಗಳ ಮೊದಲು ಸ್ಥಳೀಯ ಶಾಲೆಯ ಹತ್ತಿರ ಇರುವ ಬ್ಯಾಂಕ್ ಕಳವಿಗೆ ಪ್ರಯತ್ನ ನಡೆಸಿರುವ ಬೆನ್ನಲ್ಲೆ ಮತ್ತೆ ಶಾಲೆಗೆ ಕಳ್ಳರು ಲಗ್ಗೆ ಇಟ್ಟಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಪೊಲೀಸರ ಪರಿಶೀಲನೆ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ಟೆಕ್ನಿಕ್ ಫಾರೂಕ್, ಸ್ಥಳೀಯ ಗ್ರಾ.ಪಂ.ಸದಸ್ಯ ಅರ್ಶದ್ ಕುಕ್ಕಿಲ, ಹಳೆ ವಿದ್ಯಾರ್ಥಿ ಸಂಘದ ಹಸೈನಾರ್ ತಾಳಿತ್ತನೂಜಿ, ಪಾರೂಕ್ ಬೊಣ್ಯಕುಕ್ಕು, ಮುಖ್ಯ ಶಿಕ್ಷಕರಾದ ಮೋಹಲತಾ ಉಪಸ್ಥಿತರಿದ್ದರು.
ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು…
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ…
ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಲು ಸುಪಾರಿ ನೀಡಿದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಸೇರಿ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ…
ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಬಿಳಿ ಬಣ್ಣದ ಸ್ವೀಫ್ಟ್ ಡಿಸೈರ್ ಕಾರಿನಲ್ಲಿ ಹಿಂಸಾತ್ಮಕವಾಗಿ ಎಳೆದುಕೊಂಡು ಹೋದ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಹಾಗೂ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆ ಇದರ…
ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದ ರಾಜಾಜಿ…